ಪ್ರಧಾನಮಂತ್ರಿ ನಾಳೆ ತಿರುವನಂತಪುರಕ್ಕೆ:  ಕೇರಳ ಪಾದಯಾತ್ರೆ ಸಮಾರೋಪ ಉದ್ಘಾಟನೆ

ತಿರುವನಂತಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಾಳೆ ತಿರುವನಂತಪುರಕ್ಕೆ ಆಗಮಿಸುವರು. ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ನಡೆಯುವ ಕೇರಳ ಪಾದಯಾತ್ರೆ ಸಮಾರೋಪ ಸಮಾ ರಂಭವನ್ನು ಸೆಂಟ್ರಲ್ ಸ್ಟೇಡಿಯಂನಲ್ಲಿ ನರೇಂದ್ರ ಮೋದಿ ಉದ್ಘಾಟಿಸುವರು. ಈ ಕಾರ್ಯಕ್ರಮದಲ್ಲಿ ಸುಮಾರು ೫೦ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸು ವರೆಂದು ಅಂದಾಜಿಸಲಾಗಿದೆ. ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸತಾಗಿ ಬಿಜೆಪಿಗೆ ಸೇರ್ಪಡೆಗೊಂಡ ಸಾವಿರದಷ್ಟು ಮಂದಿ ಹಾಗೂ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಕೂಡಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ನಾಳೆ ಬೆಳಿಗ್ಗೆ ೧೦ ಗಂಟೆಗೆ ಸಮ್ಮೇಳನ ಆರಂಭಗೊಳ್ಳುವುದು. ಕೇಂದ್ರ ಸಚಿವ ವಿ. ಮುರಳೀಧರನ್, ನೇತಾರರಾದ ಕುಮ್ಮನಂ ರಾಜಶೇಖರನ್, ಪಿ.ಕೆ. ಕೃಷ್ಣದಾಸ್, ರಾಜ್ಯ ಪ್ರಭಾರಿ ಪ್ರಕಾಶ್ ಜಾವ್ದೇಕರ್ ಸಹಿತ ಹಲವರು ಭಾಗವಹಿಸಲಿದ್ದಾರೆ. ಪ್ರಧಾನ ಮಂತ್ರಿಗೆ ಸ್ವಾಗತ ನೀಡಲು ತಿರುವನಂ ತಪುರದಲ್ಲಿ ಅದ್ದೂರಿಯ ಸಿದ್ಧತೆ ನಡೆಸಲಾ ಗಿದೆ. ಇದೇ ವೇಳೆ ತಿರುವನಂತಪುರ ಮಾತ್ರವಲ್ಲದೆ ಸುತ್ತಮುತ್ತಲ ಪ್ರದೇಶಗಳಲ್ಲೂ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ.

RELATED NEWS

You cannot copy contents of this page