ಪ್ರಧಾನಿ ವಿರುದ್ಧ ಅವಹೇಳನಕಾರಿ ಹೇಳಿಕೆ: ದಿಲ್ಲಿ ಸಿ.ಎಂ, ಪ್ರಿಯಾಂಕಾಗೆ ಚು. ಆಯೋಗ ನೋಟೀಸ್
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಅನಧಿಕೃತ ಹಾಗೂ ಸುಳ್ಳು ಆಪಾದನೆ ಮಾಡಿದ ಆರೋಪದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಹಾಗೂ ಅಮ್ ಆದ್ಮಿ ಪಕ್ಷಕ್ಕೆ ಚುನಾವಣಾ ಆಯೋಗ ನೋಟೀಸ್ ಜ್ಯಾರಿಗೊಳಿಸಿದೆ. ಮಧ್ಯಪ್ರದೇಶದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಿಯಾಂಕಾ ವಾದ್ರಾ ಪ್ರಧಾನಿ ವಿರುದ್ಧ ಅನಧಿಕೃತ ಹಾಗೂ ಸುಳ್ಳು ಆಪಾದನೆ ಮಾಡಿದ್ದಾರೆಂದು ಬಿಜೆಪಿ ನ.೧೦ರಂದು ದೂರು ನೀಡಿತ್ತು. ಆ ಬಗ್ಗೆ ನವೆಂಬರ್ ೧೬ರೊಳಗೆ ಉತ್ತರ ನೀಡುವಂತೆ ಚುನಾವಣಾ ಆಯೋಗ ಜ್ಯಾರಿಗೊಳಿ ಸಿದ ನೋಟೀಸಿನಲ್ಲಿ ತಿಳಿಸಲಾಗಿದೆ.
ಇನ್ನು ಪ್ರಧಾನಿ ಮೋದಿ ಹಾಗೂ ಉದ್ಯಮಿ ಗೌತಮ್ ಅವರಿಗೆ ಸಂಬಂಧವಿದೆ ಎಂದು ಆಮ್ ಆದ್ಮಿ ಪಾರ್ಟಿ ಆ ಪಕ್ಷದ ಹ್ಯಾಂಡಲ್‌ನಿಂದ ಪೋಸ್ಟ್ ಮಾಡಲಾಗಿದೆ ಎಂದು ಬಿಜೆಪಿ ಅರವಿಂದ್ ಕೇಜ್ರಿವಾಲ್ ಮತ್ತು ಎಪಿ ವಿರುದ್ಧ ಚುನಾವಣಾ ಆಯೋಗಕ್ಕೆ ಬೇರೊಂದು ದೂರು ನೀಡಿತ್ತು. ಸಾರ್ವಜನಿಕವಾಗಿ ಯಾವುದೇ ವಿಷಯಗಳನ್ನು ಪ್ರಸ್ತಾಪಿಸುವ ಮೊದಲು ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದಿರುವ ಚುನಾವಣಾ ಆಯೋಗ ಇದು ನೀತಿ ಸಂಹಿತೆಯ ಉಲ್ಲಂ ಘನೆಯಾಗಿದೆ ಎಂದಿದೆ.