ಪ್ರೊ. ಪಿ. ಶ್ರೀಕೃಷ್ಣ ಭಟ್‌ರಿಗೆ ಕನ್ನಡ ಪಠ್ಯ ಪುಸ್ತಕ ರಚನಾ ಸಮಿತಿಯಿಂದ ಅಭಿನಂದನೆ

ಮಂಜೇಶ್ವರ: ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ 1970ರಿಂದ 1998ರ ತನಕ ಉಪನ್ಯಾಸಕರಾಗಿ, ಪ್ರೊಫೆಸರ್ ಆಗಿ, ಎಂ.ಫಿಲ್ ವಿಭಾಗದ ಕೋರ್ಡಿನೇಟರ್ ಆಗಿ ಸೇವೆ ಸಲ್ಲಿಸಿದ ಕನ್ನಡ ಭಾಷಾತಜ್ಞ, ಅನನ್ಯ ಸಾಧಕ ಪ್ರೊ. ಪಿ. ಶ್ರೀಕೃಷ್ಣ ಭಟ್‌ರಿಗೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡುವಿ ನಲ್ಲಿ ಕನ್ನಡ ಪಠ್ಯ ಪುಸ್ತಕ ಸಮಿತಿಯ ವತಿಯಿಂದ ಅಭಿನಂದನೆ ಸಲ್ಲಿಸ ಲಾಯಿತು. ಪಠ್ಯ ಪುಸ್ತಕ ಸಮಿತಿಯ ನಿರ್ದೇಶಕ, ಉಪನ್ಯಾಸಕ ಶಿವಶಂಕರÀ ಅಧ್ಯಕ್ಷತೆ ವಹಿಸಿದರು.
ನಿವೃತ್ತ ಪ್ರಾಧ್ಯಾಪಕ ರಾಮ್ ಭಟ್, ಪದ್ಮನಾಭ ಪೂಜಾರಿ ಅತಿಥಿಗಳಾಗಿ ದ್ದರು. ಪಠ್ಯ ಪುಸ್ತಕ ನಿರ್ಮಾಣ ಸಮಿತಿಯ ನೇತೃತ್ವ ವಹಿಸಿದ್ದ ಕುಂಬಳೆ ಜಿ.ಎಸ್.ಬಿ.ಎಸ್ ಶಾಲೆಯ ಮುಖ್ಯೋ ಪಾಧ್ಯಾಯ ವಿಜಯಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ರಾಮಣ್ಣ ದೇಲಂಪಾಡಿ ಅಭಿನಂದನ ಭಾಷಣ ಮಾಡಿದರು. ಕವಿತಾ ಕೂಡ್ಲು ನಿರ್ವಹಣೆ ಮಾಡಿದರು. ನಿವೃತ್ತ ಶಿಕ್ಷಕಿ ವೀಣಾ ಸ್ವಾಗತಿಸಿ, ಸರ್ವಮಂಗಳ ಟೀಚರ್ ವಂದಿಸಿದರು.
ಅಭಿನಂದನ ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ಯತೀಶ್ ಕುಮಾರ್ ರೈ, ನಿವೃತ್ತ ಮುಖ್ಯೋಪಾಧ್ಯಾಯ ರಾಧಾಕೃಷ್ಣ , ವಿಶಾಲಾಕ್ಷ ಪುತ್ರಕಳ, ನಾರಾಯಣ ದೇಲಂಪಾಡಿ, ಗೋಪಾಲ ಕಾಟುಕುಕ್ಕೆ, ಯಶೋಧ ಟೀಚರ್, ಭಾಗ್ಯಲಕ್ಷ್ಮಿ, ದಿವ್ಯಗಂಗಾ ಮಾತನಾಡಿದರು. ಇದೇ ಸಂದರ್ಭದಲ್ಲಿ ಈ ವರ್ಷ ಸೇವೆಯಿಂದ ನಿವೃತ್ತರಾಗುತ್ತಿರುವ ಎಸ್.ಎನ್.ಎಚ್.ಎಸ್ ಪೆರ್ಲ ಶಾಲೆಯ ಶಿಕ್ಷಕ ರಾಧಾಕೃಷ್ಣ ಭಟ್, ಶ್ರೀ ಅನ್ನಪೂರ್ಣೇಶ್ವರಿ ಪ್ರೌಢಶಾಲೆ ಅಗಲ್ಪಾಡಿ ಶಾಲೆಯ ಶಿಕ್ಷಕಿ ಕಲಾವತಿಯವರಿಗೂ ಗೌರವಾರ್ಪಣೆ ಸಲ್ಲಿಸಲಾಯಿತು.

RELATED NEWS

You cannot copy contents of this page