ಉಪ್ಪಳ: ಬಾತ್‌ರೂಮ್‌ನೊಳಗೆ ಬಕೆಟ್‌ನಲ್ಲಿದ್ದ ನೀರಿನಲ್ಲಿ ಮುಳುಗಿ ಪುಟ್ಟ ಮಗು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮಂಜೇಶ್ವರ ಬಳಿಯ ಕಡಂ ಬಾರಿನ ಹಾರಿಸ್ ಎಂಬವರ ಒಂದು ವರ್ಷ ಹಾಗೂ ಎರಡು ತಿಂಗಳು ಪ್ರಾಯದ ಪುತ್ರಿ ಫಾತಿಮ ಮೃತಪಟ್ಟ ಮಗು. ಶನಿವಾರ ಮಧ್ಯಾಹ್ನ ವೇಳೆ ಈ ಘಟನೆ ನಡೆದಿದೆ. ಇತರ ಮಕ್ಕಳೊಂದಿಗೆ ನೆರೆಮನೆಯಲ್ಲಿ ಆಟವಾವಾಡುತ್ತಿದ್ದ ಮಗು ಬಳಿಕ ಮನೆಗೆ ಮರಳಿ ಬಂದಿದೆ. ಮಗುವಿಗೆ ಮನೆಯವರು ಪಾನೀಯ ನೀಡಿದ ಬಳಿಕ ಹೊರಗೆ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಮನೆಯೊಳಗೆ ಹೋದ ಮಗುವನ್ನು ಕಾಣಿಸದ ಹಿನ್ನೆಲೆಯಲ್ಲಿ ಬಾತ್‌ರೂಮ್‌ನಲ್ಲಿ ಹುಡುಕಾಡಿದಾಗ ಬಕೆಟ್‌ನಲ್ಲಿ ಮಗು ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಉಪ್ಪಳದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಮಗು ತಾಯಿ ಖಮರುನ್ನೀಸ, ಸಹೋದರ ಸಹೋದರಿಯರಾದ ಶಾಹಿನ, ಶಮ್ನ, ಹಾರೀಫ, ಅಹಮ್ಮದ್ ಕಬೀರ್ ಮೊದಲಾದವರನ್ನು ಅಗಲಿದ್ದಾಳೆ.
