ಬಿಜೆಪಿ ಕುಂಬಳೆ ಉತ್ತರ ವಲಯ ಸಮಿತಿ ವತಿಯಿಂದ ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ

ಕುಂಬಳೆ: ಬಿಜೆಪಿ ಕುಂಬಳೆ ಉತ್ತರವಲಯ ಸಮಿತಿ ವತಿಯಿಂದ ಕಿದೂರು ಕುಂಟಂಗೇರಡ್ಕ ಕಾಲನಿಯ ಶಿವನಾಥರವರ ಮನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ಉತ್ತರವಲಯ ಸಮಿತಿ ಅಧ್ಯಕ್ಷ ಶಿವಪ್ರಸಾದ್ ರೈ ಮಡ್ವ ಅಧ್ಯಕ್ಷತೆ ವಹಿಸಿದರು. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲಕುಟ್ಟಿ ಉದ್ಘಾಟಿಸಿದರು. ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ರಾಜ್ಯ ಉತ್ತರವಲಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಶೆಟ್ಟಿ ಮಾತನಾಡಿದರು. ಮಂಡಲ ಕೋಶಾಧಿಕಾರಿ ರಾಧಾಕೃಷ್ಣ ರೈ ಮಡ್ವ, ಉತ್ತರವಲಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕಿದೂರು ಭಾಗವಹಿಸಿದರು. ಒ.ಬಿ.ಸಿ. ಮೋರ್ಚಾ ಮಂಡಲ ಅಧ್ಯಕ್ಷ ಮಹೇಶ್ ಪುಣಿಯೂರು ಸ್ವಾಗತಿಸಿ, ಪ್ರದೀಪ್ ಕುಮಾರ್ ಆರಿಕ್ಕಾಡಿ ವಂದಿಸಿದರು. ಹಲವರು ಭಾಗವಹಿಸಿದರು.

RELATED NEWS

You cannot copy contents of this page