ಭಾರತವನ್ನು ಅಸ್ಥಿರಗೊಳಿಸಲು ಅಲ್‌ಖೈದಾ ಉಗ್ರ ಸಂಘಟನೆ ಸಂಚು: ಎನ್‌ಐಎಯಿಂದ ದೇಶವ್ಯಾಪಕ ದಾಳಿ

ನವದೆಹಲಿ: ಭಾರತವನ್ನು ಅಸ್ಥಿರಗೊಳಿಸುವ ಸಂಚಿಗೆ ಅಲ್‌ಖೈದಾ ಉಗ್ರಗಾಮಿ ಸಂಘಟನೆ ರೂಪು ನೀಡಿರುವುದಾಗಿ  ಕೇಂದ್ರ ಸರಕಾರಕ್ಕೆ ಮಾಹಿತಿ  ಲಭಿಸಿದ್ದು ಅದಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದೇಶವ್ಯಾಪಕ ದಾಳಿ ಆರಂಭಿಸಿದೆ. ಇದರಂತೆ ಕೇರಳ, ಕರ್ನಾಟಕ ಸೇರಿ ದಂತೆ ಹಲವು  ರಾಜ್ಯಗಳಿಗೆ ಎನ್‌ಐಎ ವ್ಯಾಪಕ ದಾಳಿ ಹಾಗೂ ಶೋಧ ನಡೆ ಸಿದೆ. ಮಾತ್ರವಲ್ಲದೆ  ಹಲವು ಮಹತ್ತರ ದಾಖಲೆಗಳನ್ನೂ ವಶಪಡಿಸಿಕೊಂಡಿದೆ.  ಪಾಕಿಸ್ತಾನ ಮೂಲದ ಸಂಘಟನೆಯಾದ ಅಲ್‌ಖೈದಾಕ್ಕೆ ಬಾಂಗ್ಲಾದೇಶದ ಉಗ್ರರೂ ಬೆಂಬಲ ನೀಡುತ್ತಿದ್ದಾರೆ. ಇದರಂತೆ ಬಾಂಗ್ಲಾದೇಶಿ ಯುವಕರನ್ನು ಅಲ್‌ಖೈದಾ ಪರ ಭಾರತದಲ್ಲಿ ಪ್ರಚಾರದಲ್ಲಿ ತೊಡಗಿಸಲಾಗಿದೆಯೆಂಬ ಕಳವಳಕಾರಿ ಮಾಹಿತಿಯೂ ಎನ್‌ಐಎಗೆ ಲಭಿಸಿದೆ.  ಅಲ್‌ಖೈದಾ ಮಾತ್ರವಲ್ಲ ಆ ಸಂಘಟನೆಯೊಂದಿಗೆ ಸಹಾನುಭೂತಿ  ಹೊಂದಿರುವ ಇತರ ಹಲವು ಸಂಘಟನೆಗಳ ಕಚೇರಿಗಳಿಗೂ ಎನ್‌ಐಎ ದಾಳಿ ನಡೆಸುತ್ತಿದೆ.   ಇಂತಹ ಸಂಘಟನೆಗಳಿಗೆ ಧನ ಸಹಾಯ ಒದಗಿಸುವ ವ್ಯಕ್ತಿಗಳ ವಿರುದ್ಧ ಕರ್ನಾಟಕ, ಪಶ್ಚಿಮ ಬಂಗಾಲ, ಬಿಹಾರ, ತ್ರಿಪುರಾ, ಅಸ್ಸಾಂ ಮತ್ತು ಜಮ್ಮುಕಾಶ್ಮೀರದ  ಹಲವು ಕೇಂದ್ರಗಳಿಗೂ ಎನ್‌ಐಎ ದಾಳಿ ನಡೆಸಿದೆ. ಈವೇಳೆ ಬ್ಯಾಂಕಿಂಗ್ ವಹಿವಾಟುಗಳು, ಮೊಬೈಲ್ ಫೋನ್, ಡಿಜಿಟಲ್ ಸಾಮಗ್ರಿಗಳು ಮತ್ತು ಭಯೋತ್ಪಾದಕ ನಿಧಿ ಚಟುವಟಿಕೆ ಗಳಿಗೆ ಸಂಬಂಧಿಸಿ ದಾಖಲೆಗಳನ್ನು ಎನ್‌ಐಎ ವಶಪಡಿಸಿಕೊಂಡಿದೆ. ಸಂತ್ರಸ್ತರೆಂಬ ಸೋಗಿನಲ್ಲಿ ಭಾರತದ ವಿವಿಧ ರಾಜ್ಯಗಳಲ್ಲಿ ಅನಧಿಕೃತವಾಗಿ  ಬಂದು ನೆಲೆಸಿರುವ  ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನ ಹಲವರ ಮೇಲೆ ಎನ್‌ಐಎ ಸಂಶಯ ವ್ಯಕ್ತಪಡಿಸಿದ್ದು, ಆ ನಿಟ್ಟಿನಲ್ಲಿ ಅವರನ್ನು ತೀವ್ರ ತನಿಖೆಗೊಳಪಡಿಸಲಾಗುತ್ತಿದೆ.  ಕಳೆದ ವರ್ಷ ನವಂಬರ್‌ನಲ್ಲಿ ನಾಲ್ವರು ವಿದೇಶಿ ಪ್ರಜೆಗಳು ಸೇರಿದಂತೆ ಐವರ ವಿರುದ್ಧ ಎನ್‌ಐಎ ಚಾರ್ಜ್ ಶೀಟ್ ಸಲ್ಲಿಸಿದೆ. ಆ ಪ್ರಕರಣದ ಮುಂದುವರಿದ ತನಿಖೆಯ ಭಾಗವಾಗಿ  ಇಂದಿನಿಂದ ಈ ದಾಳಿ ಆರಂಭಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page