ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿಗಾಗಿ ಪರದಾಟ: ಪೈಪ್‌ಲೈನ್ ಬಿರುಕು ಬಿಟ್ಟು ವ್ಯಾಪಕ ಕುಡಿಯುವ ನೀರು ಪೋಲು; ನಾಗರಿಕರಲ್ಲಿ ಆಕ್ರೋಶ

ಉಪ್ಪಳ: ಕಳೆದ ಒಂದು ವಾರ ದಿಂದ ನಳ್ಳಿ ನೀರು ವಿತರಣೆ ಮೊಟಕು ಗೊಂಡಿದ್ದು, ಆದರೆ ಪೈಪ್ ಲೈನ್ ಬಿರುಕು ಬಿಟ್ಟು ಭಾರೀ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವ ಘಟನೆ ಸೋಂಕಾಲಿನಲ್ಲಿ ಕಂಡು ಬರುತ್ತಿದೆ. ಇದು ನಾಗರಿಕರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸೋಂಕಾಲು ಸಮೀಪದ ಕಿರು ಸಂಕದ ಪರಿಸರದಲ್ಲಿ ಪೈಪ್ ಬಿರುಕುಬಿಟ್ಟು ನೀರು ಪೋಲಾಗಿ ಮಳೆ ನೀರು ರೀತಿಯಲ್ಲಿ ಚರಂಡಿ ಸೇರುತ್ತಿದೆ. ನಿನ್ನೆ ಸಂಜೆ ಈ ಪರಿಸರ ದಿಂದ ಹಾದುಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರು ಇದನ್ನು ನೋಡಿ ದ್ದಾರೆ. ಹಲವು ಕಾಲದಿಂದ ಈ ರೀತಿ ಪೋಲಾಗುತ್ತಿರುವ ಬಗ್ಗೆ ಸಾರ್ವಜನಿ ಕರು ಶಂಕೆ ವ್ಯಕ್ತಪಡಿಸಿದ್ದಾರೆ. ಮಂಗ ಲ್ಪಾಡಿ ಪಂಚಾಯತ್ ವ್ಯಾಪ್ತಿಗೆ ಬೇ ಕೂರು ಕುಡಿಯುವ ನೀರು ಯೋಜನೆಯ ಟ್ಯಾಂಕ್‌ನಿAದ ವಿತರಣೆ ಗೊಳ್ಳುವ ನೀರು ಪೋಲಾಗುತ್ತಿದೆ. ಕಳೆದ ಒಂದು ವಾರದಿಂದ ನಳ್ಳಿ ನೀರು ಲಬಿsಸದೆ ಪರದಾಡುವಂತ ಪರಿಸ್ಥಿತಿ ಉಂಟಾಗಿರುವುದಾಗಿ ಪ್ರತಾಪನಗರ ಹಾಗೂ ಪರಿಸರ ನಿವಾಸಿಗಳು ತಿಳಿಸಿದ್ದಾರೆ. ವಿವಿಧ ಕಡೆಗಳಲ್ಲಿ ಪದೇ ಪದೇ ಪೈಪ್ ಬಿರುಕು ಬಿಟ್ಟು ನೀರು ಪೋಲಾಗುತ್ತಿದ್ದರೂ ದುರಸ್ಥಿಗೆ ಕ್ರಮಕೈಗೊಳ್ಳದಿರುವುದು ಅಧಿಕಾರಿಗಳು, ಸಿಬ್ಬಂದಿಗಳ ನಿರ್ಲಕ್ಷ÷್ಯವೆಂದು ಸಾರ್ವ ಜನಿಕರು ಆರೋಪಿಸಿದ್ದಾರೆ.

You cannot copy contents of this page