ಮದ್ಯ ಮಾರಾಟ ಪ್ರಶ್ನಿಸಿದ ಯುವಕನಿಗೆ ಇರಿತ

ಕುಂಬಳೆ: ಮದ್ಯ ಮಾರಾಟವನ್ನು ಪ್ರಶ್ನಿಸಿದ ದ್ವೇಷದಿಂದ ವ್ಯಕ್ತಿಯೋರ್ವ ಯುವಕನ ಕುತ್ತಿಗೆಗೆ ಬ್ಲೇಡ್‌ನಿಂದ ಗೀರಿ ಗಾಯಗೊಳಿಸಿದ ಘಟನೆ ಇಂದು ಬೆಳಿಗ್ಗೆ ಕುಂಬಳೆಯಲ್ಲಿ ನಡೆದಿದೆ. ಕೊಯಿಪ್ಪಾಡಿ ಕಡಪ್ಪುರ ನಿವಾಸಿ  ಮುಬೀನ್ (೪೧) ಎಂಬವರು ಇರಿತದಿಂದ ಗಾಯ ಗೊಂ ಡಿದ್ದು,  ಅವರನ್ನು ಕಾರಗೋಡು ಜನ ರಲ್  ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸದನ್ ಎಂಬಾತ ಇರಿದು ಗಾಯಗೊ ಳಿಸಿರುವುದಾಗಿ ಮುಬೀನ್ ದೂರಿದ್ದಾರೆ.

ಕುಂಬಳೆ ಮಾರುಕಟ್ಟೆ ರಸ್ತೆ ಸಹಿತ ವಿವಿಧೆಡೆ ವ್ಯಾಪಕವಾಗಿ  ಅನಧಿಕೃತ ಮದ್ಯ ಮಾರಾಟ ನಡೆಸುತ್ತಿರುವುದಾಗಿ  ದೂರಲಾಗಿದೆ. ಮದ್ಯ ಮಾರಾಟವನ್ನು ಮುಬೀನ್ ವಿರೋಧಿಸಿದ್ದರೆಂದು ಹೇಳಲಾಗುತ್ತಿದೆ. ಇಂದು ಬೆಳಿಗ್ಗೆ ಕುಂಬಳೆ ಪೇಟೆಯ ಬದಿಯಡ್ಕ ರಸ್ತೆಯಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿ ಮುಬೀನ್ ಹಾಗೂ ದನ್ ಮಧ್ಯೆ  ವಾಗ್ವಾದವುಂಟಾಗಿದೆಯೆಂದೂ ಈ ವೇಳೆ ಮುಬೀನ್‌ರ ಕುತ್ತಿಗೆಗೆ ಸದನ್ ಬ್ಲೇಡ್ ನಿಂದ ಗೀರಿರುವುದಾಗಿ ದೂರಲಾಗಿದೆ. ಇರಿತದಿಂದ ಗಾಯಗೊಂಡ ಮುಬೀನ್‌ರನ್ನು ಸ್ಥಳೀಯರು ಮೊದಲು ಕುಂಬಳೆಯ ಆಸ್ಪತ್ರೆಗೆ ತಲುಪಿಸಿದ್ದು, ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ದಾಖಲಿಸಲಾಗಿದೆ.

You cannot copy contents of this page