ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ ಕಾರಡ್ಕ ಪಂಚಾಯತ್ ಸಮಿತಿ ರೂಪೀಕರಣ

ಮುಳ್ಳೇರಿಯ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವ ಸ್ಥಾನದ ನವೀಕರಣ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾರಡ್ಕ ಪಂಚಾಯತ್ ಸಮಿತಿ ರೂಪೀಕರಣ ನಿನ್ನೆ ಮುಳ್ಳೇರಿಯ ಗಣೇಶ ಕಲಾಮಂದಿ ರದಲ್ಲಿ ನಡೆಯಿತು. ರವೀಶ ತಂತ್ರಿ ಕುಂಟಾರು ಉದ್ಘಾಟಿಸಿದರು. ಐತ್ತಪ್ಪ ಮವ್ವಾರು ಅಧ್ಯಕ್ಷತೆ ವಹಿಸಿದರು. ಕೇಂದ್ರ ಸಮಿತಿಯ ನ್ಯಾಯವಾದಿ ಅನಂತ ರಾಮ, ಸಂತೋಷ್ ಮಧೂರು, ಸುನಿಲ್ ಕುದ್ರೆಪ್ಪಾಡಿ, ಗಣೇಶ್ ಭಟ್ ಅಳಕ್ಕೆ ಮಾರ್ಗದರ್ಶನ ನೀಡಿದರು. ರಘು ರಾಮ್ ಬಲ್ಲಾಳ್, ಸಂಜೀವ ಶೆಟ್ಟಿ ಎಂ, ನಟರಾಜ ನಾಯ್ಕ್ ಮಾತನಾಡಿದರು.

ಕಾರಡ್ಕ ಪಂಚಾಯತ್ ಸಮಿತಿಗೆ ಗೌರವ ಮಾರ್ಗದರ್ಶಕರಾಗಿ ರವೀಶ ತಂತ್ರಿ ಕುಂಟಾರು, ಗೌರವಾಧ್ಯಕ್ಷರಾಗಿ ರಘುರಾಮ್ ಬಲ್ಲಾಳ್, ಮಾಧವ ಭಟ್ ಕೊಟ್ಟಂಗುಳಿ, ಅಧ್ಯಕ್ಷರಾಗಿ ಡಾ. ವಿ.ವಿ. ರಮಣ, ಪ್ರಧಾನ ಕಾರ್ಯದರ್ಶಿಯಾಗಿ ಹರಿಪ್ರಸಾದ್ ಮುಳ್ಳೇರಿಯ ಆಯ್ಕೆಯಾದರು. ಮಾಧವ ಭಟ್ ಕೊಟ್ಟಂಗುಳಿ ಸ್ವಾಗತಿಸಿ, ಹರಿಪ್ರಸಾದ್ ಮುಳ್ಳೇರಿಯ ವಂದಿಸಿದರು.

RELATED NEWS

You cannot copy contents of this page