ಮನೆಯಿಂದ ನಾಪತ್ತೆಯಾದ ಮಗು ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಮನೆಯಿಂದ ನಾಪತ್ತೆಯಾದ ಮೂರು ವರ್ಷದ ಮಗು ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ದಾರುಣ ಘಟನೆ ನಡೆದಿದೆ.

ಮೊಗ್ರಾಲ್ ಪುತ್ತೂರು ಸಮೀಪದ ಬೆದ್ರಡ್ಕ ಕಂಬಾರು ರಹ್ಮಾನಿಯ ಮಂಜಿಲ್‌ನ ನೌಶಾದ್- ಮರಿಯಂ ಶಾನಿಫಾ ದಂಪತಿಯ ಏಕಪುತ್ರ ಮೊಹಮ್ಮದ್ ಸೋಹನ್ ಹಬೀಬ್ (3) ಸಾವನ್ನಪ್ಪಿದ ಮಗು.

ನಿನ್ನೆ ಮಧ್ಯಾಹ್ನ ಮನೆಯಿಂದ ಮಗು ನಾಪತ್ತೆಯಾಗಿತ್ತು. ಅದರಿಂದ ಕಳವಳಗೊಂಡ ಮನೆಯವರು ಊರವರ ಸಹಾಯದಿಂದ ಹುಡುಕಾಟ ನಡೆಸಿದಾಗ ಮನೆ ಪಕ್ಕದ ಕೆರೆಯಲ್ಲಿ ಮಗು ಪ್ರಜ್ಞಾಹೀನಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಕ್ಷಣ ಮೇಲೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕಾಸರಗೋಡು ಪೊಲೀಸರು ಈ ಬಗ್ಗೆ ಅಸಹಜ  ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page