ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ ಪೈವಳಿಕೆಯಲ್ಲಿ ಸರ್ವಪಕ್ಷ ಸಂತಾಪ
ಪೈವಳಿಕೆ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ರ ನಿಧನಕ್ಕೆ ಪೈವಳಿಕೆ ಮಂಡಲ ಕಾಂಗ್ರೆಸ್ (ಐ) ಸಮಿತಿಯ ನೇತೃತ್ವದಲ್ಲಿ ಸರ್ವಪಕ್ಷ ಸಂತಾಪ ಸಭೆ ನಡೆಯಿತು. ಮಂಡಲ ಅಧ್ಯಕ್ಷ ವಸಂತ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಶಾಜಿ ಎನ್.ಸಿ. ಸ್ವಾಗತಿಸಿದರು. ಪಕ್ಷದ ಬ್ಲೋಕ್ ಸಮಿತಿ ಮುಖಂಡರಾದ ಮೋಹನ್ ರೈ, ರಾಘವೇಂದ್ರ ಭಟ್, ನಾರಾಯಣ ಏದಾರ್, ಸಿಪಿಎಂ ಲೋಕಲ್ ಸಮಿತಿ ಕಾರ್ಯದರ್ಶಿ ಚಂದ್ರ ನಾಕ್ ಮಾಣಿಪ್ಪಾಡಿ, ಮುಸ್ಲಿಂ ಲೀಗ್ ಪಂಚಾಯತ್ ಸಮಿತಿ ಕಾರ್ಯದರ್ಶಿ ಅಸೀಸ್ ಕಳಾಯಿ, ಸಿಪಿಐಯ ಲೋರೆನ್ಸ್ ಡಿಸೋಜಾ, ಝಡ್.ಎ. ಕಯ್ಯಾರ್, ಅಬ್ದುಲ್ ಹಾಜಿ, ಪೀಟರ್, ನೌಶಾದ್ ಕಯ್ಯಾರು, ಶಿವರಾಮ ಶೆಟ್ಟಿ, ಮುಸ್ತಫ, ಗಂಗಾಧರ ನಾಯ್ಕ ಭಾಗವಹಿಸಿದರು.