ಮಾದಕ ದ್ರವ್ಯ ಪತ್ತೆ: ಕಾರು ಸಹಿತ ಓರ್ವನ ವಿರುದ್ಧ ಕೇಸು ದಾಖಲು

ಉಪ್ಪಳ: ಮಂಗಲ್ಪಾಡಿ ಗ್ರಾಮದ ಶಿರಿಯ ಪೆಟ್ರೋಲ್ ಬಂಕ್‌ನ ಬಳಿ ಅಬಕಾರಿ ಇಲಾಖೆ ವಾಹನ ತಪಾಸಣೆ ಯಲ್ಲಿ ತೊಡಗಿದ್ದ ವೇಳೆ ನಿಲ್ಲಿಸದೆ ಇಲಾಖೆಯ ವಾಹನಕ್ಕೆ ಢಿಕ್ಕಿ ಹೊಡೆದು ಪರಾರಿಯಾಗಿ ಅದನ್ನು ಹಿಂಬಾಲಿಸಿದ ಅಬಕಾರಿ ಇಲಾಖೆಯವರು ಅದರಿಂದ 12.087 ಗ್ರಾಂ ಮಾದಕ ದ್ರವ್ಯವಾದ ಮೆಥಾ ಫಿಟಮಿನ್ ಪತ್ತೆಹಚ್ಚಿ ವಶಪಡಿಸಿಕೊಂಡಿ ದ್ದಾರೆ. ಇದಕ್ಕೆ ಸಂಬಂಧಿಸಿ ಕುಬಣೂರು ಗ್ರಾಮದ ಬೈತಲ ನಿವಾಸಿ ಅಬ್ದುಲ್ ಲತೀಫ್ ಎಂಬಾತನನ ವಿರುದ್ಧ ಎನ್‌ಡಿಪಿಎಸ್ ಕಾನೂನು ಪ್ರಕಾರ ಕೇಸು ದಾಖಲಿಸಲಾಗಿದೆ. ಆತ ಚಲಾಯಿಸಿದ ಕಾರನ್ನು ನಂತರ ಕುಂಬಳೆ ಅಬಕಾರಿ ರೇಂಜ್ ಕಚೇರಿಗೆ ಮಾಲು ಸಹಿತ ಹಸ್ತಾಂತರಿಸಲಾಗಿದೆ.

ಅಸಿಸ್ಟೆಂಟ್ ಎಕ್ಸೈಸ್ ಕಮಿಷನರ್‌ರ ಆದೇಶದಂತೆ ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್ ಹಾಗೂ ಕುಂಬಳೆ ಎಕ್ಸೈಸ್ ರೇಂಜ್‌ನ ತಂಡ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದೆ. ಅಬಕಾರಿ ಇಲಾಖೆಯ ವಾಹನಕ್ಕೆ ಢಿಕ್ಕಿ ಹೊಡೆದು ಪರಾರಿಯಾದ ಕಾರನ್ನು ಅಬಕಾರಿ ತಂಡದವರು ಹಿಂಬಾಲಿಸಿದಾಗ ಮುಟ್ಟಂಕುನ್ನಿಲ್‌ನ ಸಮೀಪ ಆರೋಪಿ ಆ ಕಾರನ್ನು ಉಪೇಕ್ಷಿಸಿದ್ದನೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ  ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಪ್ರಮೋದ್ ಕುಮಾರ್ ವಿ, ಪ್ರಿವೆಂಟಿವ್ ಆಫೀಸರ್ ಮನಾಸ್ ಕೆ.ವಿ., ಪ್ರಿವೆಂಟಿವ್ ಆಫೀಸರ್ ಗ್ರೇಡ್ ನೌಷಾದ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಅತುಲ್ ಟಿ.ವಿ, ಜಿತಿನ್ ವಿ, ಧನೇಶ್ ಎಂ, ಸಜೀಶ್ ಪಿ.(ಚಾಲಕ), ಪ್ರವೀಣ್ ಕುಮಾರ್ ಪಿ. ಎಂಬವರು ಒಳಗೊಂಡಿದ್ದರು.

RELATED NEWS

You cannot copy contents of this page