ಮಾದಕ ವಿರುದ್ಧ ದಿನಾಚರಣೆ: ರಾಜ್ಯದಲ್ಲಿಂದು ಮದ್ಯದಂಗಡಿಗಳಿಗೆ ರಜೆ

ಕಾಸರಗೋಡು: ವಿಶ್ವ ಮಾದಕ ವಿರುದ್ಧ ದಿನಾಚರಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದು ಡ್ರೈಡೇ ಆಚರಿಸಲಾ ಗುತ್ತಿದೆ. ಇದರಿಂದ ಬಿವರೇಜಸ್ ಕಾರ್ಪರೇಶನ್‌ನ ಮದ್ಯ ಮಾರಾಟದಂ ಗಡಿಗಳು ಹಾಗೂ ಖಾಸಗಿ ಬಾರ್‌ಗಳು ಇಂದು ಮುಚ್ಚುಗಡೆಗೊಂಡಿವೆ. ನಿನ್ನೆ ರಾತ್ರಿ 9 ಗಂಟೆಗೆ ಮುಚ್ಚುಗಡೆಗೊಂಡ ಮದ್ಯದಂಗಡಿಗಳು ನಾಳೆ ಬೆಳಿಗ್ಗೆ 9 ಗಂಟೆಗೆ ತೆರೆಯಲಿವೆ. ಅಂತಾರಾಷ್ಟ್ರ ಮಾದಕ ವಿರುದ್ಧ ದಿನದಂಗವಾಗಿ ಇಂದು ಮಾದಕ ವಿರುದ್ಧ ಪ್ರಚಾರಗಳಿಗೆ ಬೆಂಬಲಿಸುವ ಅಂಗವಾಗಿ ಸರಕಾರ ಮದ್ಯದಂಗಡಿಗಳಿಗೆ ರಜೆ ನೀಡಿದೆ. 1987ರಿಂದ ವಿಶ್ವಸಂಸ್ಥೆ ಜೂನ್ 26ರಂದು ಮಾದಕ ವಿರುದ್ಧ ದಿನವಾಗಿ ಆಚರಿಸಲು ನಿರ್ಧರಿಸಿತ್ತು. ಮಾದಕ ವಸ್ತುಗಳ ಬಳಕೆ ಹಾಗೂ ಅನಧಿಕೃತ ಸಾಗಾಟ ವಿರುದ್ಧ ಸಂದೇಶ ನೀಡಲು ಈ ದಿನ ಆಚರಿಸಲಾಗುತ್ತಿದೆ.

RELATED NEWS

You cannot copy contents of this page