ಮೀನು ಹಿಡಿಯಲು ಸಮುದ್ರಕ್ಕೆ ತೆರಳಿದ ಯುವಕ ನಾಪತ್ತೆ 

ಕುಂಬಳೆ: ಪೆರುವಾಡ್ ಕಡಪ್ಪುರ ದಲ್ಲಿ ಮೀನು ಹಿಡಿಯಲೆಂದು ತೆರಳಿ ಬಳಿಕ ನಾಪತ್ತೆಯಾದ ಯುವಕನಿಗಾಗಿ ಶೋಧ ಮುಂದುವರಿಯುತ್ತಿದೆ. ಪೆರು ವಾಡ್ ಫಿಶರೀಸ್ ಕಾಲನಿಯ ಅಬ್ದುಲ್ಲರ ಪುತ್ರ ಅರ್ಶಾದ್ (19) ಸಮುದ್ರದ ಅಲೆಗೆ ಸಿಲುಕಿ  ನಾಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ. ಇವರು ನಿನ್ನೆ ಸಂಜೆ ೬ ಗಂಟೆ ವೇಳೆ ಮೀನು ಹಿಡಿಯ ಲಿರುವ ಬಲೆ ಸಹಿತ ಪೆರುವಾಡ್  ಕಡಪ್ಪುರಕ್ಕೆ ತೆರಳಿದ್ದರು. ಅನಂತರ ಮನೆಗೆ ಮರಳಿ ಬಂದಿಲ್ಲ. ಸಮುದ್ರ ದಲ್ಲಿ ಅಲೆಗೆ ಸಿಲುಕಿ ನಾಪತ್ತೆಯಾಗಿ ರುವುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ ತಕ್ಷಣ ಅಗ್ನಿಶಾಮಕದಳ, ಕರಾವಳಿ ಪೊಲೀಸ್, ಕುಂಬಳೆ ಪೊಲೀಸರು ಹಾಗೂ ನಾಗರಿಕರು ಶೋಧ ಆರಂಭಿಸಿದ್ದರೂ ಪತ್ತೆಹಚ್ಚಲಾಗಲಿಲ್ಲ. ಇಂದು ಕೂಡಾ ಶೋಧ ನಡೆಸಲಾಗುತ್ತಿದೆ.

You cannot copy contents of this page