ಮುಂಬೈ ದಾಳಿಯ ರೂವಾರಿ ತಹವೂರ್ ರಾಣಾ ಹಸ್ತಾಂತರಕ್ಕೆ ಯು.ಎಸ್ ಸುಪ್ರೀಂಕೋರ್ಟ್ ಒಪ್ಪಿಗೆ

ನವದೆಹಲಿ: 176ಕ್ಕೂ ಹೆಚ್ಚು ಮಂದಿಯ ಪ್ರಾಣ ಬಲಿತೆಗೆದು ಕೊಂಡು ನೂರಾರು ಮಂದಿ ಗಂಭೀರ ಗಾಯಗೊಂಡಿದ್ದು,  26/11ರ  ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ, ಉದ್ಯಮಿ ತಹವೂರ್ ಹುಸೈನ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕಾದ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಆ ಮೂಲಕ ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ.

ರಾಣಾನನ್ನು ತಮಗೆ ಹಸ್ತಾಂತರಿಸಲು ಭಾರತಕಳೆದ ಆರು ವರ್ಷಗಳಿಂದ ನಿರಂತರವಾಗಿ ಅಮೆರಿಕಾದೊಂದಿಗೆ ಆಗ್ರಹಿಸಿ ಅದಕ್ಕಾಗಿ ಒತ್ತಡ ಹೇರುತ್ತಾ ಬಂದಿತ್ತು. ಒಂಭತ್ತನೇ ಸರ್ಕ್ಯೂಟ್ ಪ್ರಕಾರ ಉಭಯ ದೇಶಗಳ ನಡುವಿನ ಹಸ್ತಾಂತರ ಒಪ್ಪಂದದ ಅಡಿ ತಹವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಬಹುದೆಂದು ಯು.ಎಸ್ ಸುಪ್ರೀಕೋರ್ಟ್ ತೀರ್ಪು ನೀಡಿದೆ.

ಮುಂಬೈನಲ್ಲಿ ನಡೆದ  ಭಯೋ ತ್ಪಾದಕ ದಾಳಿಯಲ್ಲಿ ಭಾಗಿಯಾದ ಆರೋಪದ ಮೇಲೆ ರಾಣಾ ಪ್ರಸ್ತುತ ಅಮೆರಿಕದ ಲಾಸ್ ಏಂಜಲೀಸ್‌ನ ಮೆಟ್ರೋ ಪಾಲಿಟನ್ ಡಿಟೆಕ್ಷನ್ ಸೆಂಟರ್‌ನಲ್ಲಿ  ಬಂಧಿತನಾಗಿದ್ದಾನೆ.  ಕ್ಯಾಲಿಫೋರ್ನಿಯಾದ ಜಿಲ್ಲಾ ಕೇಂದ್ರ ಕೋರ್ಟ್, ಆತ  ಮುಂಬೈ ದಾಳಿಯ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಿತ್ತು. ಅದರ ವಿರುದ್ಧ ರಾಣಾ ಕಳೆದ ನವಂಬರ್ 13ರಂದು ಯು.ಎಸ್. ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದನು. ಆ ಅರ್ಜಿ ಯನ್ನು ವಜಾಗೈದ ಸುಪ್ರೀಂಕೋರ್ಟ್ ಕೊನೆಗೆ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಬಹುದೆಂಬ ಮಹತ್ತರ ತೀರ್ಪು ನೀಡಿದೆ.  2008 ನವಂಬರ್ 11ರಂದು ಪಾಕ್ ಮೂಲಕ ಲಷ್ಕರ್ ಇ ತೋಯ್ಬಾದ ಭಯೋತ್ಪಾದಕರರು   ಮುಂಬೈಯಲ್ಲಿ  ದಾಳಿ ನಡೆಸಿದ್ದರು.  ಅದರಲ್ಲಿ 176 ಮಂದಿ ಸಾವನ್ನಪ್ಪಿ, 3೦೦ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. 

You cannot copy contents of this page