ಮುಳ್ಳೇರಿಯ ಅರಮನಡ್ಕ ತೋಟದಲ್ಲಿ ಆನೆ
ಮುಳ್ಳೇರಿಯ: ಕಣ್ಣೂರು ಉಳಿಕ್ಕಲ್ ಪೇಟೆಗೆ ಕಾಡಾನೆ ತಲುಪಿ ರುವುದರಿಂದ ಜನರು ಆತಂಕಗೊಂಡಿರುವಾಗಲೇ ಮುಳ್ಳೇರಿಯ ಪೇಟೆ ಸಮೀಪದಲ್ಲೂ ಇಂದು ಬೆಳಿಗ್ಗೆ ಕಾಡಾನೆ ಕಂಡು ಬಂದಿದೆ. ಅರಮನಡ್ಕದ ಶ್ಯಾಮ್ ಎಂಬವರ ತೋಟಕ್ಕೆ ಇಂದು ಬೆಳಿಗ್ಗೆ ಆನೆ ತಲುಪಿದ್ದು, ಅದು ಅಲ್ಲೇ ಠಿಕಾಣಿ ಹೂಡಿದೆ. ತೋಟದ ಕೆಲಸಕ್ಕೆಂದು ತೆರಳಿದಾಗ ಆನೆ ಕಂಡು ಬಂದಿದ್ದು, ಸ್ಥಳೀಯರಲ್ಲಿ ಇದೀಗ ಭೀತಿ ಸೃಷ್ಟಿಯಾಗಿದೆ. ಆನೆಯನ್ನು ಓಡಿಸಲು ಸಿದ್ಧತೆ ನಡೆಸಲಾಗುತ್ತಿದೆ.