ಮುಳ್ಳೇರಿಯದಲ್ಲಿ ಮದ್ಯವರ್ಜನ ಶಿಬಿರ

ಮುಳ್ಳೇರಿಯ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 1878ನೇ ಮದ್ಯವರ್ಜನ ಶಿಬಿರ ಮುಳ್ಳೇರಿಯ ಗಣೇಶ ಕಲಾಮಂದಿರ ದಲ್ಲಿ ಜರಗುತ್ತಿದೆ. ಶಿಬಿರವನ್ನು ಆದೂರು ಎಸ್.ಐ.  ಅನುರೂಪ್ ಉದ್ಘಾಟಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಜಿಲ್ಲೆಯಲ್ಲಿ ಮದ್ಯವರ್ಜನ ಶಿಬಿರ ಶೇ. 90 ಫಲಿತಾಂಶ ನೀಡಿದೆಯೆಂದು ತಿಳಿಸಿದರು. ಜನಜಾಗೃತಿ ವೇದಿಕೆಯ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಖಂ ಅಧ್ಯಕ್ಷತೆ ವಹಿಸಿದ್ದರು.  ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ರತನ್ ಕುಮಾರ್ ನಾಯ್ಕ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಿವಕೃಷ್ಣ ಭಟ್, ಕಾರಡ್ಕ ಪಂ. ಅಧ್ಯಕ್ಷ ಗೋಪಾಲಕೃಷ್ಣ ಕೆ., ಮುಂಡೋಳು ಕ್ಷೇತ್ರ ಮುಕ್ತೇಸರ ರಘುರಾಮ ಬಲ್ಲಾಳ, ರಂಗನಾಥ ಶೆಣೈ, ಡಾ. ವಿ.ವಿ. ರಮಣ, ಸಂಜೀವ ಶೆಟ್ಟಿ ಮೊಟ್ಟೆಕುಂಜ, ಗೋಪಾಲ ಶೆಟ್ಟಿ ಅರಿಬೈಲು ಉಪಸ್ಥಿತರಿದ್ದರು. ಗಣೇಶ್ ಪ್ರಾಸ್ತಾಪಿಸಿದರು. ಮುಖೇಶ್ ಸ್ವಾಗತಿಸಿ, ಕೊರಗಪ್ಪ ವಂದಿಸಿದರು. ಸುರೇಶ್ ನಿರೂಪಿಸಿದರು.

RELATED NEWS

You cannot copy contents of this page