ಮುಷ್ಕರ ದಿನ: ಜನೋಪಕಾರಪ್ರದ ಕಾರ್ಯ ನಡೆಸಿದ ಬಿಜೆಪಿ ಕಾರ್ಯಕರ್ತರು
ಸೀತಾಂಗೋಳಿ: ಸೀತಾಂಗೋಳಿ ಸಮೀಪದ ಅನಂತಪುರ ವಾರ್ಡ್‌ನ ಪೆರ್ಣೆ ಪರಿಸರದ ರುದ್ರಭೂಮಿಯನ್ನು ಸಾರ್ವಜನಿಕ ಮುಷ್ಕರ ದಿನವಾದ ನಿನ್ನೆ ಬಿಜೆಪಿ ಕಾರ್ಯಕರ್ತರು ಶುಚಿಗೊಳಿಸಿದರು. ರುದ್ರಭೂಮಿ ಪರಿಸರದಲ್ಲಿ ಕಾಡು ಬೆಳೆದು ಇಲ್ಲಿಗೆ ತೆರಳದ ಸ್ಥಿತಿ ನಿರ್ಮಾಣವಾಗಿದ್ದ ಈ ಪ್ರದೇಶದ ಬಿಜೆಪಿ ಕಾರ್ಯಕರ್ತರು ಶ್ರಮದಾನದ ಮೂಲಕ ಸ್ಮಶಾನದ ಆವರಣ ಪೂರ್ತಿ ಸ್ವಚ್ಚಗೊಳಿಸಿ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.