ಯುವತಿಗೆ ಲೈಂಗಿಕ ದೌರ್ಜನ್ಯಕ್ಕೆತ್ನಿಸಿದ ತಂಡದ ಮೇಲೆ ಗುಂಡು ಹಾರಾಟ: ಓರ್ವ ಸಾವು

ಮುಂಬೈ: ಯುವತಿಗೆ ಲೈಂಗಿಕ  ದೌರ್ಜನ್ಯಕ್ಕೆ ಯತ್ನಿಸಿದ ತಂಡದ ಮೇಲೆ ನಡೆದ ಗುಂಡು ಹಾರಾಟದಲ್ಲಿ ಓರ್ವ ಮೃತಪಟ್ಟ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.  ಇಬ್ಬರು ಗಾಯಗೊಂಡಿದ್ದಾರೆ.  ವಲಸೆ ಕಾರ್ಮಿಕರು  ಅತೀ ಹೆಚ್ಚಿರುವ ಸ್ಥಳದಲ್ಲಿ ಈ ಘಟನೆ ನಡೆದಿದೆ.   ಅಕ್ಬರ್ ಅಹಮ್ಮದ್ ಎಂಬಾತ ಮೃತ ವ್ಯಕ್ತಿಯಾಗಿದ್ದಾನೆಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿ ಕೇರಳೀಯನಾದ ಜಯನ್ ಶಿವಾನಂದನ್ ನಾಯರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  ಗಾಯಗೊಂಡ ಇಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ಜಯನ್ ಕೇರಳೀಯ ನಾಗಿದ್ದರೂ ಜನಿಸಿ ಬೆಳೆದಿರುವುದು ಮಹಾರಾಷ್ಟ್ರದಲ್ಲಾಗಿದೆ. ತಾನು ಸಹೋದರಿಯಂತೆ ಕಂಡಿದ್ದ  ಯುವತಿಗೆ ಕಿರುಕುಳ ನೀಡುವುದನ್ನು ಕಂಡು ಸಹಿಸಲಾಗದೆ ಗುಂಡು ಹಾರಿಸಿರುವುದಾಗಿ ಜಯನ್ ಶಿವಾನಂದನ್ ಪೊಲೀಸರಲ್ಲಿ ತಿಳಿಸಿದ್ದಾನೆ. ಯುವತಿಗ ಕಿರುಕುಳ ನೀಡುತ್ತಿರುವ ಬಗ್ಗೆ  ಈ ಮೊದಲೇ ಪೊಲೀಸರಿಗೆ ದೂರು ನೀಡಲಾಗಿತ್ತೆನ್ನಲಾಗಿದೆ. ಇದರಿಂದ ಆರೋಪಿಗಳನ್ನು ಠಾಣೆಗೆ ಕರೆಸಿ ಮುನ್ನೆಚ್ಚರಿಕೆ ನೀಡಲಾಗಿತ್ತು. ಆದರೆ ಅನಂತರವೂ ಕಿರುಕುಳ ಮುಂದುವರಿದಿದೆ. ನಿನ್ನೆ ಬೆಳಿಗ್ಗೆ ಯುವತಿ ಕೆಲಸ ನಿರ್ವಹಿಸುವ ಶಾಲೆಗೆ ತಲುಪಿ ತಂಡ ಲೈಂಗಿಕ ಅತಿಕ್ರಮಣ ನಡೆಸಿರುವುದಾಗಿಯೂ ಇದರಿಂದ ಗುಂಡು ಹಾರಿಸಲಾಗಿ ದೆಯೆಂದು ಜಯನ್ ಶಿವಾನಂದನ್ ಪೊಲೀಸರಲ್ಲಿ ತಿಳಿಸಿದ್ದಾನೆ. ಗುಂಡೇಟಿನಿಂದ ಗಾಯಗೊಂಡಿದ್ದ ಅಕ್ಭರ್ ಅಹಮ್ಮದ್ ಚಿಕಿತ್ಸೆಯ ಲ್ಲಿದ್ದ ವೇಳೆ ಇಂದು ಬೆಳಿಗೆ ಸಾವಿಗೀಡಾಗಿದ್ದಾನೆ. ಜಯನ್ ಶಿವಾನಂದನ್ ಟ್ರಕ್ ಚಾಲಕ ನಾಗಿದ್ದು ಈ ಹಿಂದೆ ಸೇನೆಯಲ್ಲಿ ಕೆಲಸ ನಿರ್ವಹಿಸಿದ್ದನು ಎಂದು ಹೇಳಲಾಗುತ್ತಿದೆ. ಮುಂಬೈ: ಯುವತಿಗೆ ಲೈಂಗಿಕ  ದೌರ್ಜನ್ಯಕ್ಕೆ ಯತ್ನಿಸಿದ ತಂಡದ ಮೇಲೆ ನಡೆದ ಗುಂಡು ಹಾರಾಟದಲ್ಲಿ ಓರ್ವ ಮೃತಪಟ್ಟ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.  ಇಬ್ಬರು ಗಾಯಗೊಂಡಿದ್ದಾರೆ.  ವಲಸೆ ಕಾರ್ಮಿಕರು  ಅತೀ ಹೆಚ್ಚಿರುವ ಸ್ಥಳದಲ್ಲಿ ಈ ಘಟನೆ ನಡೆದಿದೆ.   ಅಕ್ಬರ್ ಅಹಮ್ಮದ್ ಎಂಬಾತ ಮೃತ ವ್ಯಕ್ತಿಯಾಗಿದ್ದಾನೆಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿ ಕೇರಳೀಯನಾದ ಜಯನ್ ಶಿವಾನಂದನ್ ನಾಯರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  ಗಾಯಗೊಂಡ ಇಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ಜಯನ್ ಕೇರಳೀಯ ನಾಗಿದ್ದರೂ ಜನಿಸಿ ಬೆಳೆದಿರುವುದು ಮಹಾರಾಷ್ಟ್ರದಲ್ಲಾಗಿದೆ. ತಾನು ಸಹೋದರಿಯಂತೆ ಕಂಡಿದ್ದ  ಯುವತಿಗೆ ಕಿರುಕುಳ ನೀಡುವುದನ್ನು ಕಂಡು ಸಹಿಸಲಾಗದೆ ಗುಂಡು ಹಾರಿಸಿರುವುದಾಗಿ ಜಯನ್ ಶಿವಾನಂದನ್ ಪೊಲೀಸರಲ್ಲಿ ತಿಳಿಸಿದ್ದಾನೆ. ಯುವತಿಗ ಕಿರುಕುಳ ನೀಡುತ್ತಿರುವ ಬಗ್ಗೆ  ಈ ಮೊದಲೇ ಪೊಲೀಸರಿಗೆ ದೂರು ನೀಡಲಾಗಿತ್ತೆನ್ನಲಾಗಿದೆ. ಇದರಿಂದ ಆರೋಪಿಗಳನ್ನು ಠಾಣೆಗೆ ಕರೆಸಿ ಮುನ್ನೆಚ್ಚರಿಕೆ ನೀಡಲಾಗಿತ್ತು. ಆದರೆ ಅನಂತರವೂ ಕಿರುಕುಳ ಮುಂದುವರಿದಿದೆ. ನಿನ್ನೆ ಬೆಳಿಗ್ಗೆ ಯುವತಿ ಕೆಲಸ ನಿರ್ವಹಿಸುವ ಶಾಲೆಗೆ ತಲುಪಿ ತಂಡ ಲೈಂಗಿಕ ಅತಿಕ್ರಮಣ ನಡೆಸಿರುವುದಾಗಿಯೂ ಇದರಿಂದ ಗುಂಡು ಹಾರಿಸಲಾಗಿ ದೆಯೆಂದು ಜಯನ್ ಶಿವಾನಂದನ್ ಪೊಲೀಸರಲ್ಲಿ ತಿಳಿಸಿದ್ದಾನೆ. ಗುಂಡೇಟಿನಿಂದ ಗಾಯಗೊಂಡಿದ್ದ ಅಕ್ಭರ್ ಅಹಮ್ಮದ್ ಚಿಕಿತ್ಸೆಯಲ್ಲಿದ್ದ ವೇಳೆ ಇಂದು ಬೆಳಿಗೆ ಸಾವಿಗೀಡಾಗಿದ್ದಾನೆ. ಜಯನ್ ಶಿವಾನಂದನ್ ಟ್ರಕ್ ಚಾಲಕ ನಾಗಿದ್ದು ಈ ಹಿಂದೆ ಸೇನೆಯಲ್ಲಿ ಕೆಲಸ ನಿರ್ವಹಿಸಿದ್ದನು ಎಂದು ಹೇಳಲಾಗುತ್ತಿದೆ.

RELATED NEWS

You cannot copy contents of this page