ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಸಂಚಾರ ಪ್ರಯಾಣಿಕರ ಸಮಸ್ಯೆಗೆ ಪರಿಹಾರ ಕಾಣಲು ಒತ್ತಾಯ

ಕಾಸರಗೋಡು: ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಷಟ್ಪಥವನ್ನು ಆಂಶಿಕವಾಗಿ ತೆರೆದುಕೊಟ್ಟಿರುವುದರಿಂದ ಕೆಎಸ್ ಆರ್‌ಟಿಸಿ ಹಾಗೂ ಖಾಸಗಿ ಬಸ್ ಗಳು ಇದೀಗ ಹೆದ್ದಾರಿ ಮೂಲ ಕವೇ ಸಂಚರಿಸುತ್ತಿದೆ. ಇದರಿಂದ ಈ ಬಸ್‌ಗಳಲ್ಲಿ ಬರುವ  ಸರಕಾರಿ ನೌಕ ರರು, ವಿದ್ಯಾರ್ಥಿಗಳು ಮೊದಲಾದ ವರಿಗೆ ಚೆರ್ಕಳದಿಂದ ಬಿಸಿರೋಡ್  ಮಧ್ಯೆಗಿರುವ ನಿಲುಗಡೆ ಸ್ಥಳಗಳಲ್ಲಿ ಇಳಿಯಲೋ, ಹತ್ತಲೋ ಸಾಧವಾ ಗದ ಸ್ಥಿತಿ ಉಂಟಾಗಿದೆ. ಆದ್ದರಿಂದ ಕೆಎಸ್‌ಆರ್‌ಟಿಸಿ (ಲಿಮಿಟೆಡ್ ಸ್ಟಾಪ್) ಸಹಿತ ಬಸ್‌ಗಳು ಸರ್ವೀಸ್ ರಸ್ತೆಯಲ್ಲಿ ಸಂ ಚರಿಸುವಂತೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ  ಜಿಲ್ಲಾ ಪಂಚಾಯತ್ ಸದಸ್ಯೆ ಜಾಸ್ಮಿನ್ ಕಬೀರ್ ಚೆರ್ಕಳ ಅವರು ಕಾಸರಗೋಡು ರೀಜಿನಲ್ ಟ್ರಾನ್ಸ್ ಪೋರ್ಟ್ ಆಫೀಸರ್‌ಗೆ ಮನವಿ ಸಲ್ಲಿಸಿದ್ದಾರೆ.

You cannot copy contents of this page