ವಾಂದಿ-ಭೇದಿ: ಹಲವು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ದಾಖಲು

ಕಾಸರಗೋಡು:  ಆಹಾರ ಸೇವಿಸಿದ ಬಳಿಕ ವಾಂತಿ ಭೇದಿ ಅನುಭವಗೊಂಡ ಕುಂಡಂಕುಳಿ ಸಾವಿತ್ರಿಭಾಯಿ ಫುಲೆ ಸರಕಾರಿ ಆಶ್ರಮ ಶಾಲೆಯ ಹಲವು ವಿದ್ಯಾರ್ಥಿಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.

ಇದರಲ್ಲಿ ೨೧ ಮಂದಿ ವಿದ್ಯಾರ್ಥಿಗಳನ್ನು ಬೇಡಡ್ಕ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಳಿಕ ಇವರಲ್ಲಿ ೯ ಮಂದಿಯನ್ನು ನಿನ್ನೆ ಅಪರಾಹ್ನ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಸಾಗಿಸಿ ಅಲ್ಲಿ ದಾಖಲಿಸಲಾಗಿದೆ.  ಇದರ ಹೊರತಾಗಿ ಕಳೆದ ನಾಲ್ಕು ದಿನಗಳಲ್ಲಾಗಿ ಹಲವು ವಿದ್ಯಾರ್ಥಿಗಳು ಬೇಡಡ್ಕ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಆ ಮೂಲಕ ಚಿಕಿತ್ಸೆ ಪಡೆದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ೪೨ಕ್ಕೇರಿದೆ. ಹೀಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಲ್ಲಿ ೧೬ ಮಂದಿ ಹೆಣ್ಮಕ್ಕಳಾಗಿದ್ದಾರೆ. ಈ ಶಾಲೆಯಲ್ಲಿ ೧ನೇ ತರಗತಿಯಿಂದ ಆರಂಭಗೊಂಡು ೭ನೇ ತರಗತಿ ತನಕ ಒಟ್ಟು ೨೦೧ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇವರೆಲ್ಲಾ ಜಿಲ್ಲೆಯ ವಿವಿಧ ಪ್ರದೇಶಗಳ ನಿವಾಸಿಗಳಾ ಗಿದ್ದಾರೆ. ಇವರೆಲ್ಲಾ  ಶಾಲೆಯ ಆಶ್ರಮದಲ್ಲಿ ವಾಸ್ತವ್ಯಹೂಡಿ ಕಲಿಯುವವರಾಗಿದ್ದಾರೆ.

RELATED NEWS

You cannot copy contents of this page