ವಿದ್ಯಾರ್ಥಿಗಳ ಬಸ್ ದರ ಹೆಚ್ಚಳ ಆಗ್ರಹಿಸಿ ಬಸ್ ಮಾಲಕರಿಂದ ಅನಿರ್ದಿಷ್ಟಾವಧಿ ಮುಷ್ಕರ

ಕಾಸರಗೋಡು: ವಿದ್ಯಾರ್ಥಿಗಳ ಮಿನಿಮಮ್ ಚಾರ್ಜ್ 1 ರೂ.ನಿಂದ 5 ರೂ.ಗೆ ಹೆಚ್ಚಿಸಬೇಕೆಂದು ಆಗ್ರಹಿಸಿ ಜುಲೈ 22ರಿಂದ ಖಾಸಗಿ ಬಸ್ ಮಾಲಕರು ನಡೆಸುವ ಅನಿರ್ದಿಷ್ಟ ಕಾಲ ಮುಷ್ಕರದಂಗವಾಗಿ ಜುಲೈ ೮ರಂದು ಸೂಚನಾ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. ದರ ಹೆಚ್ಚಳ ಸಹಿತ ಬಸ್ ಮಾಲಕರು ಮುಂದಿಡುವ ಆರು ಪ್ರಧಾನ ಬೇಡಿಕೆಗಳಲ್ಲಿ ತೀರ್ಮಾನವಾಗ ದಿದ್ದರೆ ಅನಿರ್ದಿಷ್ಟ ಕಾಲ ಮುಷ್ಕರ ಹೂಡುವುದಾಗಿ ಮಾಲಕರ ಸಂಘಟನೆ ತಿಳಿಸಿದೆ. ಆದರೆ ಪ್ರಯಾಣಿಕರ ದರ ಹೆಚ್ಚಿಸಲು ಬೇಡಿಕೆ ಮುಂದಿಡುವುದಿಲ್ಲವೆಂದು ಅವರು ತಿಳಿಸಿದ್ದಾರೆ.

You cannot copy contents of this page