ವಿದ್ಯಾರ್ಥಿಗಳು ಸಂಚರಿಸಿದ ಥಾರ್ ಜೀಪು ಅಪಘಾತ: ನಾಲ್ವರಿಗೆ ಗಾಯ

ಕುಂಬಳೆ: ವಿದ್ಯಾರ್ಥಿಗಳು ಸಂಚರಿಸಿದ ಥಾರ್ ಜೀಪು ಡಿವೈಡರ್‌ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದು ಸಂಭವಿಸಿದ ಅಪಘಾತದಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರ ವಾಗಿದೆ ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ 7 ಗಂಟೆ ವೇಳೆ ಕುಂಬಳೆ- ಮುಳ್ಳೇರಿಯ ಕೆಎಸ್ ಟಿಪಿ ರಸ್ತೆಯ ನಾರಾಯಣಮಂ ಗಲದಲ್ಲಿ ಅಪಘಾತ ಸಂಭವಿಸಿದೆ.

ಉಪ್ಪಳ ಪತ್ವಾಡಿ ನಿವಾಸಿ ಸಾಹಿದ್, ಮುಳಿಯಡ್ಕ ನಿವಾಸಿ ಅಫ್‌ಲಾಲ್, ಬಂಬ್ರಾಣ ನಿವಾಸಿ ಕಾಶಿಫ್, ರುಮೈದ್ ಎಂಬಿವರು ಗಾಯಗೊಂಡಿದ್ದಾರೆ. ಈ ಪೈಕಿ ಸಾಹಿದ್ ಹಾಗೂ ರುಮೈದ್‌ನನ್ನು ಮಂಗಳೂರಿನ ಆಸ್ಪತ್ರೆಯಲ್ಲೂ, ಮತ್ತಿಬ್ಬರನ್ನು ಕುಂಬಳೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಶೇಣಿಯಲ್ಲಿ ನಡೆದ ಶಾಲಾ ಕಲೋತ್ಸವ ಮುಗಿದು ಮರಳುತ್ತಿದ್ದ ವಿದ್ಯಾರ್ಥಿಗಳು ಸಂಚರಿಸಿದ ಜೀಪು ಅಪಘಾತಕ್ಕೀಡಾಗಿದೆ. ಈ ವೇಳೆ ವಾಹನದಲ್ಲಿ ಆರು ಮಂದಿ ಇದ್ದರು. ಅಪಘಾತ ಸಂಭವಿಸಿದಾಕ್ಷಣ ಇಬ್ಬರು ಓಡಿ ಪರಾರಿಯಾಗಿದ್ದಾರೆ.

ಅಪಘಾತ ಕುರಿತು ಮಾಹಿತಿ ಲಭಿಸಿ ತಲುಪಿದ ಕುಂಬಳೆ ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್  ಕುಮಾರ್,ಎಸ್.ಐ. ಕೆ. ಶ್ರೀಜೇಶ್ ಹಾಗೂ ನಾಗರಿಕರ ನೇತೃತ್ವದಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ತಲುಪಿಸಲಾಯಿತು.

RELATED NEWS

You cannot copy contents of this page