ವಿದ್ಯುತ್ ದರ ಏರಿಕೆಗೆ ಪ್ರತಿಭಟನೆ: ಬದಿಯಡ್ಕದಲ್ಲಿ ಕಾಂಗ್ರೆಸ್‌ನಿಂದ ಪಂಜಿನ ಮೆರವಣಿಗೆ
ಬದಿಯಡ್ಕ: ಕೇರಳ ಸರಕಾರ ವಿದ್ಯುತ್ ದರ ಏರಿಕೆ ಮಾಡಿರುವುದನ್ನು ಪ್ರತಿಭಟಿಸಿ ಬದಿಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಬದಿಯಡ್ಕ ಪೇಟೆಯಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು. ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಕಾರಡ್ಕ ಬ್ಲೋಕ್ ಉಪಾಧ್ಯಕ್ಷ ಖಾದರ್ ಮಾನ್ಯ ಉದ್ಘಾಟಿಸಿದರು. ಬ್ಲೋಕ್ ಕಾರ್ಯದರ್ಶಿ ಶಾಫಿ ಗೋಳಿಯಡ್ಕ, ಮಂಡಲ ಕಾರ್ಯದರ್ಶಿಗಳಾದ ರಾಮಕೃಷ್ಣ ವಿದ್ಯಾಗಿರಿ, ಕೇಶವ ಪಾಟಾಳಿ, ವಾಮನ ನಾಯ್ಕ್ ಚುಕ್ಕಿನಡ್ಕ, ಶಾಹುಲ್ ಹಮೀದ್, ಸುಂದರ ಚುಕ್ಕಿನಡ್ಕ, ನೇತಾರರಾದ ಶ್ರೀನಾಥ್, ಮಾಜಿ ಮಂಡಲ ಅಧ್ಯಕ್ಷ ಶಾಫಿ, ನಿಜೇಶ್, ಸತೀಶ್, ಜೋನಿ, ಖಮರು, ಮೊಹಮ್ಮದ್ ಮೊದಲಾದವರು ನೇತೃತ್ವ ನೀಡಿದರು. ಲೋಹಿತಾಕ್ಷ ಸ್ವಾಗಸಿತಿ, ಬಲ್ತೀಸ್ ಕ್ರಾಸ್ತಾ ವಂದಿಸಿದರು.