ವಿಮಾನ ನಿಲ್ದಾಣದಲ್ಲಿ 87 ಲಕ್ಷ ರೂ. ಮೌಲ್ಯದ ಚಿನ್ನ ವಶ: ಕಾಸರಗೋಡು ನಿವಾಸಿ ಕಸ್ಟಡಿಗೆ

ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಗಲ್ಫ್‌ನಿಂದ ಅಕ್ರಮವಾಗಿ ಸಾಗಿಸಿದ್ದ 83,32, ರೂ. ಮೌಲ್ಯದ 1223 ಗ್ರಾಂ ಚಿನ್ನ ಪತ್ತೆಹಚ್ಚಿದ್ದಾರೆ.

ಇದಕ್ಕೆ ಸಂಬಂಧಿಸಿ ಕಾಸರಗೋಡು ಪಡನ್ನ ಕೊವ್ವಲ್ ವೀಟಿಲ್ ಪ್ರತೀಶ್‌ನನ್ನು ಕಸ್ಟಮ್ಸ್ ತಂಡ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದೆ. ಈತ ಶಾರ್ಜಾದಿಂದ ವಿಮಾನದಲ್ಲಿ ಕಣ್ಣೂರು ನಿಲ್ದಾಣಕ್ಕೆ ಬಂದಿಳಿದಿದ್ದನು. ಆತನ ದೇಹ ತಪಾಸಣೆ ನಡೆಸಿದಾಗ ಚಾಕ್ಲೆಟ್ ಕವರ್‌ನಲ್ಲಿ ಪೇಸ್ಟ್ ರೂಪದಲ್ಲಾಗಿಸಿದ ಚಿನ್ನ ಆತನ ಪ್ಯಾಂಟ್ ಜೇಬಿನೊಳಗೆ ಪತ್ತೆಯಾಗಿದೆಯೆಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page