ಶಿವಶಕ್ತಿ ಮಹಾಯಾಗ: ಮಡಲು ಹೆಣೆಯಲು ಚಾಲನೆ

ಬದಿಯಡ್ಕ: ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿ.28, 29ರಂದು ನಡೆಯಲಿರುವ ಶಿವ ಶಕ್ತಿ ಮಹಾಯಾಗದ `ಯಜ್ಞಮಂಟಪ’ ನಿರ್ಮಾಣದ ಸಲುವಾಗಿ ಚಪ್ಪರ ನಿರ್ಮಾಣ ಸಮಿತಿಯ ನೇತೃತ್ವದಲ್ಲಿ ಮಡಲು ಹೆಣೆಯುವ ಕಾರ್ಯಕ್ರಮ ಆಯೋಜಿಸಲಾಯಿತು. ಊರಿನ ಹಿರಿಯರಾದ ಚೋಮ, ಗೋಪಾಲನ್ ನಾಯರ್ ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ.ಆರ್, ಗೋಪಾಲಾಚಾರಿ ಚಂದ್ರAಪಾರೆ, ರವಿಶಂಕರ ವಾಲ್ತಾಜೆ, ರಾಮಚಂದ್ರ ವೋರ್ಕೂಡ್ಲು, ಸಂತೋಷ್ ಚಂದ್ರAಪಾರೆ, ನಾರಾಯಣ ಪಿಲಿಕೂಡ್ಲು, ನಾರಾಯಣನ್ ನಾಯರ್, ಸೇತುನಾಥ್, ಉಣ್ಣಿಕೃಷ್ಣನ್, ರವಿ ಚಂದ್ರAಪಾರೆ, ರಾಧಾಕೃಷ್ಣ ನಾಯ್ಕ್ ಬಾಲಡ್ಕ, ಸುಜಾತ ಶಶಿಧರನ್, ಶಾಂತಾ ನಾರಾಯಣ ಅರ್ಲಡ್ಕ ನೇತೃತ್ವವಹಿಸಿದ್ದರು.

RELATED NEWS

You cannot copy contents of this page