ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸುತ್ತುಗೋಪುರ ಶಿಲಾನ್ಯಾಸ ನಾಳೆ

ಕೂಡ್ಲು: ಬಾದಾರ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ತೆಂಕು ಭಾಗದ ಸುತ್ತುಗೋಪುರಕ್ಕೆ ಶಿಲಾನ್ಯಾಸ ನಾಳೆ ಬೆಳಿಗ್ಗೆ 11.45ರಿಂದ ನಡೆಯಲಿದೆ. ಇದರಂಗವಾಗಿ 11.30ಕ್ಕೆ ಮಹಾಪೂಜೆ ಬಳಿಕ ಬ್ರಹ್ಮಶ್ರೀ ಅರವತ್ತು ಪದ್ಮನಾಭ ತಂತ್ರಿ ವರ್ಯರಿಂದ ಶಿಲಾನ್ಯಾಸ, 12 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವೇಣುಗೋಪಾಲ ಅಧ್ಯಕ್ಷತೆ ವಹಿಸುವರು. ಧಾರ್ಮಿಕ ಮುಂದಾಳು ವಸಂತ ಪೈ ಉದ್ಘಾಟಿಸುವರು. ಬ್ರಹ್ಮಶ್ರೀ ಅರವತ್ತು ಪದ್ಮನಾಭ ತಂತ್ರಿ ಆಶೀರ್ವಚನ ನೀಡುವರು. ಶಿಲ್ಪಿ ರಮೇಶ ಕಾರಂತ, ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ಬ್ರಹ್ಮ ವಾಹಕ ಕೃಷ್ಣ ಪ್ರಸಾದ ಅಡಿಗ, ಅನುವಂಶಿಕ ಮುಕ್ತೇಸರ ಸದಾಶಿವ, ಕೋಶಾಧಿಕಾರಿ ಸದಾಶಿವ ಶೆಟ್ಟಿ ಸಹಿತ ಹಲವರು ಭಾಗವಹಿಸುವರು. ಸುರೇಶ್ ಮಣಿಯಾಣಿ, ಗೋಪಾಲಕೃಷ್ಣ ಪಾಯಿಚ್ಚಾಲ್ ಉಪಸ್ಥಿತರಿರುವರು.

RELATED NEWS

You cannot copy contents of this page