ಶ್ರೀ ವಿಶ್ವ ಬ್ರಾಹ್ಮಣ ಸೇವಾ ಸಂಘ ವಾರ್ಷಿಕ ಮಹಾಸಭೆ, ವಿನಂತಿ ಪತ್ರ ಬಿಡುಗಡೆ

ಕಾಸರಗೋಡು: ವಿಶ್ವಬ್ರಾಹ್ಮಣ ಸೇವಾ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಭುವನೇಶ ಆಚಾರ್ಯ ತಾಳಿಪಡ್ಪು ಇವರ ಅಧ್ಯಕ್ಷತೆಯಲ್ಲಿ ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ ಜರಗಿತು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಕೆ.ಜಿ. ಗಣೇಶ ಆಚಾರ್ಯ ಮಂಡಿಸಿದರು. ನಲ್ಕ ಪ್ರವೀಣ್ ಕುಮಾರ್ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಇದೇ ವೇಳೆ ಶ್ರೀ ವಿಶ್ವಕರ್ಮ ಮಹಿಳಾ ಸಂಘ, ಯುವಕ ಸಂಘ ವಾರ್ಷಿಕ ಮಹಾಸಭೆ ಜರಗಿತು. ಹೇಮಲತಾ ಗಣೇಶ ಆಚಾರ್ಯ ವಾರ್ಷಿಕ ವರದಿ, ಗಾಯತ್ರಿ ಭವಾನಿ ಶಂಕರ ಆಚಾರ್ಯ ಲೆಕ್ಕಪತ್ರ, ಯುವಕ ಸಂಘದ ಕಾರ್ಯದರ್ಶಿ ಕೆರೆಮನೆ ವಸಂತ ಆಚಾರ್ಯ ವಾರ್ಷಿ ಕ ವರದಿ, ಹರಿಪ್ರಸಾದ್ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ನೂತನ ಸಮಿತಿಯನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಶೀತಲ್ ಕುಮಾರ್ ಆಚಾರ್ಯ, ಕಾರ್ಯದರ್ಶಿಯಾಗಿ ಹರಿಪ್ರಸಾದ್ ಆಚಾರ್ಯ, ಕೋಶಾಧಿ ಕಾರಿಯಾಗಿ ಪುರಂದರ ಆಚಾರ್ಯ ಆಯ್ಕೆಯಾದರು. ಇದೇ ವೇಳೆ ಪುತ್ತಿಗೆ ಪಂ. ಸದಸ್ಯೆ ಕಾವ್ಯಾ ಯಜ್ಞೇಶ ಆಚಾರ್ಯರನ್ನು ಗೌರವಿಸಲಾಯಿತು. ಸಭಾಭವನ ನಿರ್ಮಾಣದ ವಿನಂತಿ ಪತ್ರವನ್ನು ಸಂಘದ ಮಾಜಿ ಅಧ್ಯಕ್ಷ ಕೆ. ಸುರೇಂದ್ರ ಆಚಾರ್ಯ ಬಿಡುಗಡೆಗೊಳಿಸಿದರು. ಕಲ್ಮಾಡಿ ಸದಾಶಿವ ಆಚಾರ್ಯ, ಪೆರ್ಣೆ ವಿಷ್ಣು ಆಚಾರ್ಯ, ಬಿ. ವಿಘ್ನೇಶ ಆಚಾರ್ಯ, ಬೋವಿಕ್ಕಾನ ಚಂದ್ರಶೇಖರ ಆಚಾರ್ಯ, ಮಧುಸೂದನ ಆಚಾರ್ಯ, ಚಂಚಲಾಕ್ಷಿ ಚಂದ್ರಶೇಖರ ಆಚಾರ್ಯ ಸಹಿತ ಹಲವು ಗಣ್ಯರು ಮಾತನಾಡಿದರು.

ಭುವನೇಶ ಆಚಾರ್ಯ, ಸುರೇಶ ಆಚಾರ್ಯ, ಗಣೇಶ ಆಚಾರ್ಯ, ಪ್ರವೀಣ್ ಆಚಾರ್ಯ, ಶೀತಲ್ ಕುಮಾರ್ ಆಚಾರ್ಯ, ವೇದಾವತಿ ಸದಾಶಿವ ಆಚಾರ್ಯ ಭಾಗವಹಿಸಿದರು. ಕೆರೆಮನೆ ತುಕರಾಮ ಆಚಾರ್ಯ ಸ್ವಾಗತಿಸಿ, ವೇಣುಗೋಪಾಲ ಆಚಾರ್ಯ ನೆಕ್ರಾಜೆ ವಂದಿಸಿದರು.

You cannot copy contents of this page