ಸಿಪಿಎಂನಿಂದ ಕಾಂಗ್ರೆಸ್‌ಗೆ: ಪ್ರಚಾರ ಸತ್ಯಕ್ಕೆ ದೂರ- ಸಿಪಿಎಂ
ಪೈವಳಿಕೆ: ಬಾಯಾರು ನಿವಾಸಿ ಮುಸ್ತಫ ಎಂಬ ವ್ಯಕ್ತಿ ಸಿಪಿಎಂನಿಂದ ಕಾಂಗ್ರೆಸ್‌ಗೆ ಸೇರಿದ್ದಾರೆ ಎಂಬ ಪ್ರಚಾರ ಸತ್ಯಕ್ಕೆ ದೂರವಾಗಿದೆ ಎಂದು ಸಿಪಿಎಂ ತಿಳಿಸಿದೆ. ಈ ವ್ಯಕ್ತಿ ಸಕ್ರಿಯ ಮುಸ್ಲಿಂ ಲೀಗ್ ಕಾರ್ಯಕರ್ತ ನಾಗಿದ್ದು, ಸಿಪಿಎಂಗೂ ಇವರಿಗೂ ಯಾವುದೇ ಸಂಬಂಧವಿಲ್ಲವೆಂದು ಸಿಪಿಎಂ ಬಾಯಾರು ಲೋಕಲ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಕಾಂಗ್ರೆಸ್ ನಡೆಸುವ ಈ ಅಪ ಪ್ರಚಾರ ವನ್ನು ಜನರು ತಿಳಿದುಕೊಳ್ಳಬೇಕೆಂದು ಸಮಿತಿ ಕರೆ ನೀಡಿದೆ.