ಸುಲ್ತಾನ್ ಗೋಲ್ಡ್‌ನ ನೂತನ ಶೋರೂಂ ಮೈಸೂರಿನಲ್ಲಿ ಕಾರ್ಯಾರಂಭ

ಕಾಸರಗೋಡು: ಜ್ಯುವೆಲ್ಲರಿ ವಲಯದಲ್ಲಿ ಹೆಸರು ಗಳಿಸಿದ ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ಜ್ಯುವೆಲ್ಲ ರಿಯ ನೂತನ ಶೋರೂಂ ಅರಮನೆ ಗಳ ನಗರ ಎಂದು ಕರೆಯಲ್ಪಡುವ ಮೈಸೂರಿನಲ್ಲಿ ಇತ್ತೀಚೆಗೆ ಕಾರ್ಯಾ ರಂಭಗೊಂಡಿತು. ಬಾಲಿವುಡ್ ನಟಿ ಪದ್ಮಶ್ರೀ ರವೀನಾ ಟಂಡನ್ ಉದ್ಘಾಟಿಸಿದರು. ಅವರು ಮಾತನಾಡಿ ಸುಲ್ತಾನ್ ಜ್ಯುವೆಲ್ಲರಿಯ ವೈವಿಧ್ಯಮಯ ಸಂಗ್ರಹವನ್ನು ಶ್ಲಾಘಿಸಿದರು. ಸುಲ್ತಾನ್ ಗ್ರೂಪ್‌ನ ಮೆನೇಜಿಂಗ್ ಡೈರೆಕ್ಟರ್ ಡಾ. ಅಬ್ದುಲ್ ರೌಫ್ ಮಾತನಾಡಿ ಜ್ಯುವೆಲ್ಲರಿಯ ಆರಂಭದಿಂದ ಇದುವರೆಗೆ ಸಾಗಿ ಬಂದ ದಾರಿಯನ್ನು ವಿವರಿಸಿದರು. ಗ್ರೂಪ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಬ್ದುಲ್ ರಹೀಂ ಮಾತನಾಡಿ ಮುಂದಿನ ಶಾಖೆ ಬೆಂಗಳೂರು ಎಚ್‌ಬಿಆರ್ ಲೇಔಟ್‌ನಲ್ಲಿ ಜೂನ್ ಮೂರನೇ ವಾರ ಕಾರ್ಯಾರಂಭಗೊಳ್ಳುವುದಾಗಿ ತಿಳಿಸಿದರು.

You cannot copy contents of this page