ಬಿಜೆಪಿ ಅಭ್ಯರ್ಥಿಯಿಂದ ಚರ್ಚ್‌ಗಳ ಸಹಿತ ವಿವಿಧೆಡೆ ಮತ ಯಾಚನೆ

ಕಾಸರಗೋಡು:  ಕಾಸರಗೋಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಎಲ್. ಅಶ್ವಿನಿಯವರು ನಿನ್ನೆ ವಿವಿಧ ಕಡೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು.  ಮಧೂರು ಪಂಚಾ ಯತ್ ಸದಸ್ಯ, ಬಿಜೆಪಿ ನೇತಾರನಾದ  ರವಿ ಗಟ್ಟಿಯವರ ಮನೆಯಿಂದ ನಿನ್ನೆಯ ಪ್ರಚಾರ ಕಾರ್ಯ ಆರಂಭಗೊಂಡಿತು. ಬಳಿಕ ಗರಿಗಳ ರವಿವಾರ ಆಚರಣೆಯಂಗವಾಗಿ ಬೇಳ, ಕೊಲ್ಲಂಗಾನ, ಕಾಸರಗೋಡು ಕೋಟೆಕಣಿಯ ಚರ್ಚ್‌ಗಳಿಗೆ ಎಂ.ಎಲ್. ಅಶ್ವಿನಿ ಹಾಗೂ ನೇತಾರರು ಭೇಟಿ ನೀಡಿ ಶುಭಾಶಯ ತಿಳಿಸಿದರು.  ಮಧೂರು ಮಿತ್ರಕಲಾ ವೃಂದದ ಆಶ್ರಯದಲ್ಲಿ ಹಮ್ಮಿಕೊಂಡ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ ತಂಡಗಳಿಗೆ ಅವರು ಶುಭ ಹಾರೈಸಿದರು.  ಬಿಜೆಪಿ  ನೇತಾರರಾದ ಸುಕುಮಾರ ಕುದ್ರೆಪ್ಪಾಡಿ,  ರಾಮಪ್ಪ ಮಂಜೇಶ್ವರ, ಬದಿಯಡ್ಕ ಪಂ. ಅಧ್ಯಕ್ಷ ಡಿ.ಶಂಕರ, ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ ಮೊದಲಾದವರು ಜೊತೆಗಿದ್ದರು.

RELATED NEWS

You cannot copy contents of this page