ಸ್ಕೂಟರ್ ಸಹಿತ ಕರ್ನಾಟಕ ಮದ್ಯ ವಶ

ಕುಂಬಳೆ: ಮಂಜೇಶ್ವರ ಮೀಂಜ ಚಿಗುರುಪಾದೆ ಜಂಕ್ಷನ್ ಬಳಿ ಕುಂಬಳೆ ರೇಂಜ್ ಅಬಕಾರಿ ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ.ಯು.ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ನಿರ್ಮಿತ 2.52 ಲೀಟರ್ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಚಿಗುರುಪಾದೆಯ ಪುರಂದರ ಶೆಟ್ಟಿ (48) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾಲು ಸಾಗಿಸಲು ಬಳಸಿದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಸುಜಿತ್ ಕೆ, ಅಖಿಲೇಶ್ ಎಂ.ಎಂ., ಪ್ರಜಿತ್ ಪಿ, ಸುಕಾತ್  ಮತ್ತು ಪ್ರಿವೇಶ್ ಕುಮಾರ್ ಪಿ. ಎಂಬವರು ಒಳಗೊಂಡಿದ್ದಾರೆ.

RELATED NEWS

You cannot copy contents of this page