ಹತ್ತರ ಬಾಲಕಿಗೆ ಕಿರುಕುಳ ಯತ್ನ : ವೃದ್ಧನ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: ಹತ್ತರ ಹರೆಯದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಆರೋಪದಂತೆ 60ರ ಹರೆಯದ ವೃದ್ಧನ ವಿರುದ್ಧ ಬೇಡಗಂ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ. ಬೇಡಗಂ ಪುಳಿವಂಜಿಯ ಬಾಲಚಂದ್ರನ್ (60) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಇತ್ತೀಚೆಗೆ ಈತ ಬಾಲಕಿಗೆ ಕಿರುಕುಳ ನೀಡಲೆತ್ನಿಸಿ ದ್ದಾನೆಂದು ತಿಳಿಸಿ ಬಾಲಕಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.

ಕೇಸು ದಾಖಲಿಸಿದ ವಿಷಯ ತಿಳಿಯುತ್ತಿದ್ದಂತೆ ಈತ ನಾಪತ್ತೆಯಾ ಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಾಗಿ ಶೋಧ ನಡೆಯುತ್ತಿದೆಯೆಂದು ತಿಳಿಸಲಾಗಿದೆ.

RELATED NEWS

You cannot copy contents of this page