ಹಾವು ಕಡಿದು ಚಿಕಿತ್ಸೆಯಲ್ಲಿದ್ದ ಕೂಲಿ ಕಾರ್ಮಿಕ ಮೃತ್ಯು

ಉಪ್ಪಳ: ವಿಷಪೂರಿತ ಹಾವು ಕಡಿದು ಚಿಕಿತ್ಸೆಯಲ್ಲಿದ್ದ ಕೂಲಿ ಕಾರ್ಮಿಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮೀಯಪದವು ಪಳ್ಳತ್ತಡ್ಕ ನಿವಾಸಿ ದಿ| ದಾದು ಮೂಲ್ಯ ಎಂಬವರ ಪುತ್ರ ಅಶೋಕ (43) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಈ ತಿಂಗಳ 18ರಂದು ರಾತ್ರಿ 8 ಗಂಟೆ ವೇಳೆ ಮನೆ ಅಂಗಳದಲ್ಲಿ ಅಶೋಕರಿಗೆ ಹಾವು ಕಡಿದಿತ್ತೆನ್ನಲಾಗಿದೆ. ಕೂಡಲೇ ಅವರನ್ನು ಮಂಗಳೂರು ಕಂಕನಾಡಿಯ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು. ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಇಂದು ಮುಂಜಾನೆ 4 ಗಂಟೆಗೆ ಅಶೋಕ ಮೃತಪಟ್ಟರು.

ಅಶೋಕರಿಗೆ ಕಚ್ಚಿದ ಹಾವನ್ನು  ಕೂಡಲೇ ಮನೆಯವರು ಹಿಡಿದಿದ್ದು ಪರಿಶೀಲಿಸಿದಾಗ ಅದು ವಿಷಪೂರಿತವೆಂದು ತಿಳಿದು ಬಂದಿತ್ತು.

ಮೃತರು ತಾಯಿ ಲಲಿತ, ಪತ್ನಿ ಪ್ರಮೀಳ, ಮಕ್ಕಳಾದ ಪ್ರಜ್ವಲ್, ಧನ್ಯಾ, ಸಹೋದರ- ಸಹೋದರಿಯರಾದ ಪ್ರಕಾಶ್, ರವಿ, ಪ್ರೇಮ, ಮಮತ, ಹೇಮಲತ, ರೇಖ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page