ಹೊಸಂಗಡಿಯಲ್ಲಿ ಜವಾಹರ್‌ಲಾಲ್ ನೆಹರು ಸಂಸ್ಮರಣೆ

ಮಂಜೇಶ್ವರ: ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಹೊಸಂ ಗಡಿ ಗೇಟ್‌ವೇ ಸಭಾಂಗಣದಲ್ಲಿ ನೆಹರು ಸ್ಮೃತಿ ದಿನಾಚರಣೆ ಜರಗಿತು.  ಕಾಂಗ್ರೆಸ್ ಸೇವಾ ದಳ ರಾಜ್ಯ ಅಧ್ಯಕ್ಷ ರಮೇಶ್ ಕರುವಾಚೇರಿ ಉದ್ಘಾಟಿಸಿ ದರು. ಅವರು ಮಾತನಾಡಿ, ದಿ| ಜವಾಹರ್‌ಲಾಲ್ ನೆಹರು ಜಗತ್ತು ಕಂಡ ಅತ್ಯುತ್ತಮ ರಾಜತಾಂತ್ರಿಕ ಮೇಧಾವಿಯಾಗಿದ್ದರು. ಹಿಂದುಳಿದ ಭಾರತವನ್ನು ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳ ನೆಲೆಗೆ ತರುವಲ್ಲಿ ನೆಹರೂ ವಹಿಸಿದ ಪಾತ್ರ ಮಹತ್ವದ್ದೆಂದು ನುಡಿದರು.

ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್. ಮುಖ್ಯ ಅತಿಥಿಯಾಗಿ ಭಾಗ ವಹಿಸಿದ್ದರು. ಮುಖಂಡರಾದ ಶಾಂತಾ ಆರ್. ನಾಯ್ಕ್, ಪುರುಷೋತ್ತಮ ಅರಿ ಬೈಲು, ಹನೀಫ್, ಬಾಬು ಬಂದ್ಯೋಡು, ಮನ್ಸೂರ್ ಬಿ.ಎಂ, ಇಬ್ರಾಹಿಂ, ಸತ್ಯನ್ ಸಿ, ಇ.ಎಂ. ಖಾದರ್ ಹಾಜಿ, ಮೊಹಮ್ಮದ್ ಮಜಾಲ್, ನಾಗೇಶ್, ಮೊಹಮ್ಮದ್ ಸೀಗಂದಡಿ, ಯೂಸಫ್, ಗಣೇಶ್ ಪಾವೂರು, ವಸಂತ್‌ರಾಜ್, ಅಝೀಜ್, ಬರ್ನಾಂಡ್, ಇರ್ಷಾದ್ ಮೊದಲಾದವರು ಉಪಸ್ಥಿತರಿದ್ದರು. ದಿವಾಕರ ಎಸ್.ಜೆ. ಸ್ವಾಗತಿಸಿ, ಖಲೀಲ್ ಬಜಾಲ್ ವಂದಿಸಿದರು.

RELATED NEWS

You cannot copy contents of this page