ಅಂಚೆ ಕಚೇರಿ ಬಾಡಿಗೆ ಕಟ್ಟಡದಲ್ಲಿ: ಕುಂಬಳೆಯಲ್ಲಿ ಅಂಚೆ ಇಲಾಖೆಯ 30 ಸೆಂಟ್ಸ್ ಸ್ಥಳ ತ್ಯಾಜ್ಯ ಸಂಗ್ರಹ ಕೇಂದ್ರವಾಗಿ ಮಾರ್ಪಾಡು
ಕುಂಬಳೆ: ಕುಂಬಳೆ ಪೇಟೆಯ ಹೃದಯ ಭಾಗದಲ್ಲಿ ಅಂಚೆ ಕಚೇರಿಯ ಅಧೀನದಲ್ಲಿರುವ 30 ಸೆಂಟ್ಸ್ ಸ್ಥಳತ್ಯಾಜ್ಯ ಎಸೆಯಲು ಕಾದಿರಿಸಿದಂ ತಿದೆ. ಅಂಚೆ ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರು ವಾಗಲೇ ಅಂಚೆ ಕಚೇರಿಗಾಗಿ ಮೀಸ ಲಿಟ್ಟ ಸ್ಥಳದಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ.
ಕಟ್ಟಡ ಬಾಡಿಗೆ ರೂಪದಲ್ಲಿ ಪ್ರತೀ ವರ್ಷ ಭಾರೀ ಮೊತ್ತವನ್ನು ಅಂಚೆ ಇಲಾಖೆ ಖರ್ಚು ಮಾಡುತ್ತಿದೆ ಯೆಂದೂ ನಾಗರಿಕರು ತಿಳಿಸುತ್ತಿದ್ದಾರೆ. ಅದು ಮಾತ್ರವಲ್ಲದ ತ್ಯಾಜ್ಯ ಎಸೆಯುವವರು ತ್ಯಾಜ್ಯ ಎಸೆಯುವ ಅಂಚೆ ಕಚೇರಿ ಕಟ್ಟಡ ನಿರ್ಮಾಣ ಸ್ಥಳದಿಂದ ತ್ಯಾಜ್ಯ ತೆರವುಗೊಳಿಸಲು ಕೂಡಾ ಪ್ರತೀ ವರ್ಷ ಭಾರೀ ಮೊತ್ತ ಖರ್ಚು ಮಾಡಲಾಗುತ್ತಿದೆ.
ಕುಂಬಳೆ ಪೇಟೆಯಲ್ಲಿ ಮೀನು ಮಾರುಕಟ್ಟೆ ಸಮೀಪ ಶಾಲಾ ರಸ್ತೆ ಬದಿ ಅಂಚೆ ಇಲಾಖೆಗೆ ಮೀಸಲಿರಿಸಿದ ಸ್ಥಳ ಹಲವು ವರ್ಷಗಳಿಂದ ಪಾಳು ಬಿದ್ದಿದೆ. ಕಾಡು ತುಂಬಿಕೊಂಡಿರುವ ಈ ಸ್ಥಳ ತ್ಯಾಜ್ಯ ಎಸೆಯಲು ಸೂಕ್ತ ಪ್ರದೇಶವಾಗಿ ಮಾರ್ಪಾಡುಗೊಂ ಡಿದೆ. ಇದೇ ವೇಳೆ ವರ್ಷಗಳ ಹಿಂದೆ ಖಾಸಗಿ ವ್ಯಕ್ತಿಯೋರ್ವ ಈ ಸ್ಥಳವನ್ನು ಅತಿಕ್ರಮಿಸಿದ್ದನು. ಈ ಪ್ರಕರಣ ಹೈಕೋರ್ಟ್‌ನಲ್ಲೂ ವಿಚಾರಣೆ ನಡೆದು ಬಳಿಕ ಅಂಚೆ ಇಲಾಖೆಗೆ ಸ್ಥಳ ಮರಳಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳು ಸ್ಥಳ ಅಳೆದು ಅದಕ್ಕೆ ತಂತಿ ಬೇಲಿ ನಿರ್ಮಿಸಿದರು. ಆದರೆ ತಂತಿಬೇಲಿ ತಮ್ಮ ಸಂಸ್ಥೆಗಳಿಗಿರುವ ದಾರಿಗೆ ತಡೆಯುಂಟುಮಾಡುತ್ತಿದೆ ಯೆಂದು ವ್ಯಾಪಾರಿಗಳು ಹಾಗೂ ಮೀನು ಮಾರಾಟಗಾರರು ತಿಳಿಸಿದ ಹಿನ್ನೆಲೆಯಲ್ಲಿ ತಂತಿ ಬೇಲಿಯನ್ನು ತೆಗೆಯಲಾಗಿದೆ.
ಜಿಲ್ಲೆಯಲ್ಲಿ ಆರು ಅಂಚೆ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿವೆ. ಸ್ವಂತವಾಗಿ ಸ್ಥಳವಿದ್ದರೂ ರಾಜ್ಯದಲ್ಲಿ ನೂರರಷ್ಟು ಅಂಚೆ ಕಚೇರಿಗಳು ಈಗಲೂ ಬಾಡಿಗೆ ಕಟ್ಟಡಗಳಲ್ಲೇ ಕಾರ್ಯಾಚರಿಸುತ್ತಿದೆ ಯೆಂದು ಅಂಚೆ ಇಲಾಖೆ ನೌಕರರು ತಿಳಿಸುತ್ತಿದ್ದಾರೆ. ಕಟ್ಟಡ ಬಾಡಿಗೆಗಾಗಿ ಪ್ರತೀ ವರ್ಷ ಭಾರೀ ಮೊತ್ತ ಖರ್ಚು ಮಾಡಲಾಗುತ್ತಿದೆ.
ಇದೇ ವೇಳೆ ಕುಂಬಳೆಯಲ್ಲಿ ಸುಸಜ್ಜಿತ ಅಂಚೆ ಕಚೇರಿ ಕಟ್ಟಡ ನಿರ್ಮಿಸಲಿರುವ ಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆಯೆಂದು ಅಧಿಕಾರಿಗಳು ತಿಳಿಸುತ್ತಿ ದ್ದಾರೆ. ಕೆಳ ಅಂತಸ್ತಿನಲ್ಲಿ ಶಾಪಿಂಗ್ ಕಾಂಪ್ಲೆಕ್ಸ್, ಮೇಲಿನ ಮಹಡಿಯಲ್ಲಿ ಅಂಚೆ ಕಚೇರಿಗಾಗಿ ಸೌಕರ್ಯ ಏರ್ಪಡಿಸಲಾಗುವುದೆಂದೂ ತಿಳಿಸಲಾಗಿದೆ.