ಅಂಬಾರು ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಪ್ರತಿಷ್ಠಾ ಕಲಶಾಭಿಷೇಕ, ಕೋಲ ಎ.20ರಿಂದ

ಉಪ್ಪಳ: ಅಂಬಾರು ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಶ್ರೀ ಕೊರಗ ತನಿಯ ಹಾಗೂ ಗುಳಿಗ ದೈವದ ಪ್ರತಿಷ್ಠಾ ಕಲಶಾಭಿಷೇಕ ಮತ್ತು ಶ್ರೀ ಕೊರಗಜ್ಜ ದೈವದ ಕೋಲ ಈ ತಿಂಗಳ 20, 21ರಂದು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ವೇದಮೂರ್ತಿ ವಾಸುದೇವ ಹೊಳ್ಳ ಅಂಬಾರು ಇವರ ಉಪಸ್ಥಿತಿಯಲ್ಲಿ ನಡೆಯಲಿದೆ. 20ರಂದು ಸಂಜೆ 5.30ಕ್ಕೆ ಋತ್ವಿಜರ ಆಗಮನ, ರಾತ್ರಿ 9ಕ್ಕೆ ವಿವಿಧ ವೈಧಿಕ ಕಾರ್ಯಕ್ರಮ, 21ರಂದು ಬೆಳಿಗ್ಗೆ 9ಕ್ಕೆ ಗಣಪತಿ ಹವನ, ಕಲಶ ಪೂರ್ಣ, ಆದಿsವಾಸ ಹೋಮ, 10.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಅಂಬಾರು ಶ್ರೀ ಕೊರಗಜ್ಜ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಸತ್ಯವತಿ ನಾರಾಯಣ ಅಂಬಾರು ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ದೈವ ಸೇವಕರನ್ನು ಸನ್ಮಾನಿಸಲಾಗುವುದು.
11.50ಕ್ಕೆ ಶ್ರೀ ಕೊರಗ ತನಿಯ ದೈವಕ್ಕೆ ನವಕ ಕಲಶಾಭಿಷೇಕ ಮತ್ತು ಶ್ರೀ ಗುಳಿಗ ದೈವಕ್ಕೆ ಪಂಚ ಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 5.30ಕ್ಕೆ ಗುಳಿಗ ದೈವಕ್ಕೆ ತಂಬಿಲ ಸೇವೆ, ರಾತ್ರಿ 7ಕ್ಕೆ ಭಂಡಾರ ತೆಗೆಯುವುದು, 7.30ಕ್ಕೆ ಅನ್ನಸಂತರ್ಪಣೆ, 8ಕ್ಕೆ ಶ್ರೀ ಕೊರಗ ತನಿಯ ದೈವದ ಕೋಲ ನಡೆಯಲಿದೆ.

RELATED NEWS

You cannot copy contents of this page