ಕೊಯಿಪ್ಪಾಡಿಯಲ್ಲಿ ಕಡಲ್ಕೊರೆತ ತೀವ್ರ: ಎರಡು ಕುಟುಂಬಗಳ ಸ್ಥಳಾಂತರ; ರಸ್ತೆ, ವಿದ್ಯುತ್ ಕಂಬಗಳು ಅಪಾಯಭೀತಿಯಲ್ಲಿ

ಕುಂಬಳೆ: ಕೊಯಿಪ್ಪಾಡಿ ಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಸಮುದ್ರ ತಡೆಗೋಡೆ ಸಮುದ್ರಪಾಲಾಗಿದೆ.  20ರಷ್ಟು ತೆಂಗಿನ ಮರಗಳು ಈಗಾಗಲೇ ಸಮುದ್ರದ ಅಲೆಯಲ್ಲಿ ಕೊಚ್ಚಿಹೋಗಿದೆ. ವಿದ್ಯುತ್ ಕಂಬಗಳು  ಧರಾಶಾಹಿ ಯಾಗುವ ಭೀತಿಯಲ್ಲಿದೆ.  ಈ ಪ್ರದೇಶದ ಸವಿತಾ ಹಾಗೂ ವಿಮಲ ಎಂಬಿವರ ಕುಟುಂಬಗಳನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸ ಲಾಗಿದೆ.  ಕೊಯಿಪ್ಪಾಡಿ ಕಡಪ್ಪುರ ದಿಂದ ಕೋಟಿ ರಸ್ತೆಯ ಫಿಶರೀಸ್ ಎಲ್‌ಪಿ ಶಾಲೆಗೆ ನಿರ್ಮಿಸಿದ ಕಾಂಕ್ರೀಟ್ ರಸ್ತೆ ಯಾವುದೇ ಕ್ಷಣ ಕುಸಿಯುವ ಭೀತಿಯಲ್ಲಿದೆ. ಇದೇ ವೇಳೆ  ಪ್ರತೀ ವರ್ಷ  ಕೋಟ್ಯಂತರ ರೂಪಾಯಿಗಳ ಕಗ್ಗಲ್ಲುಗಳನ್ನು ಸಮುದ್ರ ಕಿನಾರೆಯಲ್ಲಿರಿಸುತ್ತಿದ್ದು, ಆದರೂ ಕಡಲ್ಕೊರೆತವನ್ನು ತಡೆಗಟ್ಟಲು ಸಾಧ್ಯವಾಗಿಲ್ಲ.

RELATED NEWS

You cannot copy contents of this page