ಅಕ್ರಮ ಸಾಗಾಟ : 78 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆ; ಕಾಸರಗೋಡು ನಿವಾಸಿ ಸೆರೆ
ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿ ಕಾರಿಗಳ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ವಿದೇಶದಿಂದ ಅಕ್ರಮವಾಗಿ ತರಲಾಗಿದ್ದ 78 ಲಕ್ಷ ರೂ. ಮೌಲ್ಯದ 1078 ಗ್ರಾಂ ಚಿನ್ನ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂ ಡಿದ್ದಾರೆ. ಅಬುದಾ ಬಿಯಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ನಿಲ್ದಾಣದಲ್ಲಿ ಬಂದಿಳಿದ ಕಾಸg ಗೋಡು ನಿವಾಸಿ ಮೆಹರೂಫ್ ಮುಹಮ್ಮದ್ ಎಂಬಾತನಿಂದ ಈ ಚಿನ್ನ ಪತ್ತೆಹಚ್ಚಲಾಗಿದೆ. ಆತನನ್ನು ಕಸ್ಟಮ್ಸ್ ತಂಡ ವಶಕ್ಕೆ ತೆಗೆದು ಧರಿಸಿದ್ದ ಒಳಉಡುಪಿನೊಳಗೆ ಚಿನ್ನ ಪತ್ತೆಯಾಗಿದೆಯೆಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.