ಅಡುಗೆ ತಯಾರಿ ವೇಳೆ ಸೀರೆಗೆ ಬೆಂಕಿ ತಗಲಿ ಗಾಯಗೊಂಡ ವೃದ್ಧೆ ಮೃತ್ಯು
ಕುಂಬಳೆ: ಅಡುಗೆ ತಯಾರಿ ವೇಳೆ ಸೀರೆಗೆ ಬೆಂಕಿ ತಗಲಿ ಗಂಭೀರ ಗಾಯಗೊಂಡಿದ್ದ ವೃದ್ಧೆ ಮೃತಪಟ್ಟರು. ಪೆರುವಾಡ್ ನಿವಾಸಿ ದಿ| ಕೃಷ್ಣ ಗಟ್ಟಿಯವರ ಪತ್ನಿ ಸುಂದರಿ (82) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಬೆಂಕಿ ತಗಲಿ ಇವರು ಗಂಭೀರ ಸುಟ್ಟು ಗಾಯಗೊಂ ಡಿದ್ದರು. ಇದರಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೊನ್ನೆ ರಾತ್ರಿ ನಿಧನ ಸಂಭವಿಸಿದೆ.
ಮೃತರು ಸಹೋದರ ಲೋಕೇಶ್, ಸಹೋದರಿ ಪುಷ್ಪಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಘಟನೆ ಬಗ್ಗೆ ಕುಂಬಳೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.