ಅತ್ಯಾಚಾರ ಪ್ರಕರಣ: ಜರ್ಮನಿಯಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಕೊನೆಗೂ ಸೆರೆ
ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನ ಸಂಸದ ಹಾಗೂ ಜನತಾದಳ (ಎಸ್) ನೇತಾರ ಪ್ರಜ್ವಲ್ ರೇವಣ್ಣ (33)ರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಾಗಿ ಕಳೆದ ೩೪ ದಿನ ಗಳಿಂದ ಜರ್ಮನಿಯಲ್ಲಿ ತಲೆಮರೆಸಿ ಕೊಂಡಿದ್ದ ಪ್ರಜ್ವಲ್ ನಿನ್ನೆ ಮಧ್ಯರಾತ್ರಿ ಬೆಂಗಳೂರಿನ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನದಲ್ಲಿ ಬಂದಿಳಿಯುತ್ತಿರುವಂ ತೆಯೇ ಎಸ್.ಐ.ಟಿ ತಂಡ ಅವರನ್ನು ಅಲ್ಲಿಂದಲೇ ಬಂಧಿಸಿದೆ. ಎಸ್ಐಟಿಯ ಮಹಿಳಾ ಪೊಲೀಸರಿಂದಲೇ ಅವರನ್ನು ಬಂಧಿಸಲಾಯಿತು ಎಂಬ ವಿಶೇ ಷತೆಯೂ ಇದಕ್ಕಿದೆ. ನಂತರ ಅವರನ್ನು ಜೀಪಿನಲ್ಲಿ ಇಂದು ಮುಂಜಾನೆ ೨ ಗಂಟೆಗೆ ಎಸ್ಐಟಿ ಕೇಂದ್ರಕ್ಕೆ ಸಾಗಿಸಿ ಅಲ್ಲಿ ಅವರನ್ನು ತೀವ್ರ ವಿಚಾರಣೆಗೊಳಪಡಿಸಲಾಯಿತು.
ಹಾಸನದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಸಿಲುಕಿಕೊಂಡಿರುವ ಪ್ರಜ್ವಲ್ರ ಬಂಧನಕ್ಕೆ ಎಸ್ಐಟಿ ವಿಶೇಷ ತಂಡ ದಿನಗಳಿಂದಲೇ ಬಲೆಬೀಸಿತ್ತು. ಈ ಮಧ್ಯೆ ಜರ್ಮನಿಯ ಮೂನಿಚ್ ನಗರದಿಂದ ಲುಫ್ತಾನ್ಸ್ ಏರ್ಲೈನ್ಸ್ ನಲ್ಲಿ ನಿನ್ನೆ ರಾತ್ರಿ ೧೨.೪೫ರ ಹೊತ್ತಿಗೆ ಪ್ರಜ್ವಲ್ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ತಮ್ಮ ಲಗ್ಗೇಜ್ನೊಂದಿಗೆ ಅವರು ಹೊರಬಂದಾಗ ವಿಮಾನ ನಿಲ್ದಾಣದ ಇಮಿಗ್ರೇಶನ್ ಅಧಿಕಾರಿಗಳು ಹಾಗೂ ಕೈಗಾರಿಕಾ ಭದ್ರತಾ ಪಡೆಯ ಸಹಾಯದೊಂದಿಗೆ ಪೊಲೀಸರು ಅವರನ್ನು ಅಲ್ಲಿಂದಲೇ ಬಂಧಿಸಿದ್ದಾರೆ.
ಕರ್ನಾಟಕ ಮಾತ್ರವಲ್ಲದೆ ಭಾರತ ಮತ್ತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರೀ ಸಂಚಲನ ಮೂಡಿಸಿರುವ ಈ ಲೈಂಗಿಕ ಪ್ರಕರಣದಲ್ಲಿ ಪ್ರಜ್ವಲ್ರನ್ನು ಬಂಧಿಸುವಂತೆ ಭಾರೀ ಒತ್ತಡವೂ ಉಂಟಾಗಿತ್ತು. ಮಾತ್ರವಲ್ಲ ಪ್ರಜ್ವಲ್ರ ವಿರುದ್ಧ ಲುಕೌಟ್ ನೋಟೀಸನ್ನು ಜ್ಯಾರಿಗೊಳಿಸಲಾಗಿತ್ತು. ಅನಂತರ ಬ್ಲೂ ಕಾರ್ನರ್ ನೋಟೀಸು ಕೂಡಾ ಜ್ಯಾರಿಗೊಳಿಸಲಾಗಿತ್ತು.
ಬಂಧನಕ್ಕೊಳಗಾದ ಪ್ರಜ್ವಲ್ರ ಹೇಳಿಕೆ ದಾಖಲಿಸಿಕೊಂಡ ಪೊಲೀಸರು ಅವರನ್ನು ಬಳಿಕ ಇಂದು ಬೆಳಿಗ್ಗೆ ಶಿವಾಜಿ ನಗರದ ಬೌರಿಂಗ್ ಮತ್ತು ಲೇಡಿ ಕರ್ಸನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಲಾ ಯಿತು. ಬಳಿಕ ಅವರನ್ನು ನ್ಯಾಯಾಲ ಯದಲ್ಲಿ ಹಾಜ ರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ನ್ಯಾಯಾಲಯದ ಅನು ಮತಿ ಮೇರೆಗೆ ಅವರನ್ನು ಮತ್ತೆ ಕಸ್ಟಡಿಗೆ ಪಡೆದುಕೊಳ್ಳಲಾಗುವುದೆಂದು ತನಿಖಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.