ಅಧಿಕಾರಿಗಳು ಕಣ್ಮುಚ್ಚಿದ್ದಾರೆ: ಮಂಗಲ್ಪಾಡಿಯಲ್ಲಿ ಮಲಿನ ಜಲ ತೆರೆದ ಸ್ಥಳಕ್ಕೆ; ರೋಗಭೀತಿ
ಉಪ್ಪಳ: ಮಂಗಲ್ಪಾಡಿ ಪಂಚಾಯತ್ನಲ್ಲಿ ಆರೋಗ್ಯ ಸಂರಕ್ಷಣೆ ಮತ್ತೆ ಹಳಿತಪ್ಪುತ್ತಿದೆ ಎಂದು ದೂರಲಾಗಿದೆ. ಡೆಂಗ್ಯೂಜ್ವರ ಸಹಿತದ ಅಂಟು ಜಾಡ್ಯಗಳು ವ್ಯಾಪಕಗೊಳ್ಳುತ್ತಿರುವ ಮಧ್ಯೆ ಸಾರ್ವಜನಿಕ ಸ್ಥಳಗಳಿಗೆ ಮಲಿನ ಜಲವನ್ನು ಹರಿಯಬಿಡುತ್ತಿದ್ದರೂ ಪಂಚಾಯತ್ ಮೌನ ವಹಿಸಿದೆ ಎಂದು ಸ್ಥಳೀಯರು ದೂರಿದ್ದಾರೆ. ಕೈಕಂಬದ ಸೊಸೈಟಿ ಹಾಸ್ಪಿಟಲ್ನ ಸಮೀಪದ ತೆರೆದ ಸ್ಥಳಕ್ಕೆ ಫ್ಲಾಟ್ನ ಮಲಿನ ಜಲವನ್ನು ಹರಿಸಲಾಗುತ್ತಿದೆ. ಇದು ಈ ಪ್ರದೇಶದಲ್ಲಿ ದುರ್ನಾತವನ್ನುಂಟುಂಮಾಡಿದ್ದು, ರೋಗಭೀತಿಯನ್ನು ತಂದಿದೆ. ಈ ಬಗ್ಗೆ ಪಂಚಾಯತ್ ಹಾಗೂ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಸ್ಥಳೀಯರು ಒಟ್ಟಾಗಿ ಆಂದೋಲನಕ್ಕೆ ಮುಂದಾಗುವುದಾಗಿ ಎಚ್ಚರಿಸಿದ್ದಾರೆ.