ಅನಧಿಕೃತ ವ್ಯಾಪಾರ ನಿಯಂತ್ರಿಸಲು ಕೆಜಿಟಿಎ ಕಾಸರಗೋಡು ವಲಯ ಮಹಾಸಭೆ ಆಗ್ರಹ
ಕಾಸರಗೋಡು: ಕೆಟಿಜಿಎ ಕಾಸರಗೋಡು ವಲಯ ಮಹಾಸಭೆ ತಾಳಿಪಡ್ಪು ಉಡುಪಿ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷ ಕೆ.ಜೆ. ಸಜಿ ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷ ಅಶ್ರಫ್ ಸುಲ್ಸನ್ ಅಧ್ಯಕ್ಷತೆ ವಹಿಸಿದರು. ಅನಧಿಕೃತ ವ್ಯಾಪಾರವನ್ನು ನಿಯಂತ್ರಿಸಬೇಕು, ಓಣಂ ಹಬ್ಬದ ಸಂದರ್ಭದಲ್ಲಿ ಮಾತ್ರ ವ್ಯಾಪಾರ ನಡೆಸುವವರಿಗೆ ಲೈಸನ್ಸ್ ನೀಡುವುದರಿಂದ ಸ್ಥಳೀಯಾಡಳಿತ ಸಂಸ್ಥೆಗಳು ಹಿಂಜರಿಯಬೇಕೆಂದು ಠರಾವು ಮಂಡಿಸಲಾಯಿತು. ಪ್ರಧಾನ ಕಾರ್ಯದರ್ಶಿ ಸಮೀರ್ ಪ್ರಸ್ತಾಪಿಸಿದರು. ಮರ್ಚೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಇಲ್ಯಾಸ್ ಟಿ.ಎ. ಶುಭ ಕೋರಿದರು. ಜಿಲ್ಲಾ ಕೋಶಾಧಿಕಾರಿ ಹಸನ್ ಹಾಜಿ, ಪದಾಧಿಕಾರಿ ಅಟ್ಲಾಸ್ ರೆಹ್ಮಾನ್ ಭಾಗವಹಿಸಿದರು. ಪ್ರಧಾನ ಹಾರೀಸ್ ಸ್ವಾಗತಿಸಿ, ಮಂಡಲ ಉಪಾಧ್ಯಕ್ಷ ಫೈರೋಸ್ ಮುಬಾರಕ್ ವಂದಿಸಿದರು. ನೂತನ ಪದಾಧಿಕಾರಿ ಗಳನ್ನು ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ ಸುಲ್ಸನ್ ಮೊಯ್ದೀನ್ ಹಾಜಿ, ಜನಾರ್ದನನ್ ಕಣ್ಣನ್ಸ್, ಗಫೂರ್ ಹಾಜಿ ಬಾಂಬೆ ಗಾರ್ಮೆಂಟ್ಸ್, ಅಧ್ಯಕ್ಷರಾಗಿ ಅಶ್ರಫ್ ಐವ, ಪ್ರಧಾನ ಕಾರ್ಯದರ್ಶಿಯಾಗಿ ಹಾರಿಸ್ ಸೆನೋರ ಕೋಶಾಧಿಕಾರಿಯಾಗಿ ಶಂಸೀರ್ ಸರೋನ್, ಉಪಾಧ್ಯಕ್ಷರಾಗಿ ಫೈರೋಸ್ ಮುಬಾರಕ್, ಅಶ್ರಫ್ ಫೋರ್ಯು, ನರೇಂದ್ರನ್ ಬದಿಯಡ್ಕ, ಜೊತೆ ಕಾರ್ಯದರ್ಶಿಗಳಾಗಿ ಹಾರಿಸ್ ಬ್ರೀನ್ಸ್, ಇಕ್ಬಾಲ್ ಹಿಮ, ಸೈದು ಆಯ್ಕೆಯಾದರು