ಅನ್ವರ್‌ರ ಹಿಂದೆ ಕಾಂಗ್ರೆಸ್, ಲೀಗ್, ಜಮಾಯತ್ ಇಸ್ಲಾಮಿ- ಸಿಪಿಎಂ
ಕಣ್ಣೂರು: ಶಾಸಕ ಪಿ.ವಿ. ಅನ್ವರ್‌ರ ಹಿಂದೆ ಕಾಂಗ್ರೆಸ್- ಮುಸ್ಲಿಂ ಲೀಗ್ ಮತ್ತು ಜಮಾಯತ್ ಇಸ್ಲಾಮಿ ಕಾರ್ಯವೆಸಗುತ್ತಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಆರೋಪಿಸಿದ್ದಾರೆ.
ಸಿಪಿಎಂ ವಿರುದ್ಧ ಅದ್ಯಾರೇ ಹೆಡೆ ಎತ್ತಿ ಬಂದರೂ, ಅದನ್ನೆಲ್ಲಾ ನಾವು ಸಮರ್ಥವಾಗಿ ಹಿಮ್ಮೆಟ್ಟಿಸುವೆವು. ಯಾಕೆಂದರೆ ಸಿಪಿಎಂ ಒಂದು ಕೇಡರ್ ಪಾರ್ಟಿಯಾಗಿದೆ. ಬಹುಸಂಖ್ಯಾತ ಹಾಗೂ ಅಲ್ಪ ಸಂಖ್ಯಾತ ಕೋಮುವಾದಿ ಸಂಘಟನೆಗಳನ್ನು ಸಮಾನವಾಗಿ ಎದುರಿಸಿ ಮುಂದಕ್ಕೆ ಸಾಗುವ ಪಕ್ಷವಾಗಿದೆ ನಮ್ಮದು.
ಅನ್ವರ್ ಹೊರಿಸಿರುವ ಆರೋಪಗಳನ್ನು ಕೇರಳ ಪೊಲೀಸ್ ವಿಭಾಗ ಸಮಗ್ರವಾಗಿ ತನಿಖೆ ನಡೆಸುತ್ತಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರೇ ಇದರ ತನಿಖೆ ನಡೆಸುತ್ತಿದ್ದಾರೆ. ಒಂದು ತಿಂಗಳೊಳಗಾಗಿ ತನಿಖಾ ವರದಿ ಸರಕಾರಕ್ಕೆ ಲಭಿಸಲಿದೆ. ಆ ವರದಿ ಲಭಿಸಿದಾಕ್ಷಣ ತಪ್ಪು ಎಸಗಿದವರು ಅದ್ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಉಂಟಾಗಲಿದೆ ಎಂದೂ ಗೋವಿಂದನ್ ಹೇಳಿದ್ದಾರೆ.