ಅಬ್ಬಾಸ್ ಬೀಗಂ ಕಾಸರಗೋಡು ನಗರಸಭೆಯ ಹೊಸ ಅಧ್ಯಕ್ಷ
ಕಾಸರಗೋಡು: ಕಾಸರಗೋಡು ನಗರಸಭೆಯ ಹೊಸ ಅಧ್ಯಕ್ಷರಾಗಿ ಚೇರಂಗೈ ಈಸ್ಟ್ ವಾರ್ಡ್ನ ಮುಸ್ಲಿಂ ಲೀಗ್ ಕೌನ್ಸಿಲರ್ ಅಬ್ಬಾಸ್ ಬೀಗಂ ವಿದ್ಯುಕ್ತವಾಗಿ ಆಯ್ಕೆಗೊಂಡಿದ್ದಾರೆ.
ಕಾಸರಗೋಡು ನಗರಸಭಾ ಕೌನ್ಸಿಲ್ ಹಾಲ್ನಲ್ಲಿ ನಿನ್ನೆ ನಡೆದ ಚುನಾವಣೆಯಲ್ಲಿ ನಗರಸಭೆಯ ಎಲ್ಲಾ ೩೭ ಕೌನ್ಸಿಲರ್ಗಳೂ ಭಾಗವಹಿಸಿದ್ದರು. ಇದರಲ್ಲಿ ಅಬ್ಬಾಸ್ ಬೀಗಂ ರಿಗೆ ೨೦ ಮತ್ತು ಪ್ರತಿಸ್ಪರ್ಧಿ ಅಣಂಗೂರು ವಾರ್ಡ್ನ ಬಿಜೆಪಿ ಕೌನ್ಸಿಲರ್ ಪಿ. ರಮೇಶ್ರಿಗೆ ೧೪ ಮತಗಳು ಲಭಿಸಿ ದುವು. ಆ ಮೂಲಕ ಅಬ್ಬಾಸ್ ಬೀಗಂ ರನ್ನು ವಿಜಯಿಯಾಗಿ ಘೋಷಿಸಲಾ ಯಿತು. ಅದಾದ ಕೂಡಲೇ ಅಬ್ಬಾಸ್ ಬೀಗಂ ನಗರಸಭೆಯ ಅಧ್ಯಕ್ಷ ರಾಗಿಯೂ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡರು.
ಸಿಪಿಎಂ ಕೌನ್ಸಿಲರ್ ಎಂ. ಲಲಿತ, ಪಕ್ಷೇತರ ಕೌನ್ಸಿಲರ್ಗಳಾದ ಸಕೀನಾ ಮೊದೀನ್ ಮತ್ತು ಹಸೀನಾ ನೌಶಾದ್ ತಮ್ಮ ಮತಗಳನ್ನು ಅಸಿಂಧುಗೊಳಿಸಿದರು.
ಕಾಸರಗೋಡ ಜಿಲ್ಲಾ ಕೈಗಾರಿಕಾ ಕೇಂದ್ರದ ಮೆನೇಜರ್ ಅದಿಲ್ ಮೊಹಮ್ಮದ್ ಚುನಾವಣಾಧಿಕಾರಿ ಯಾಗಿ ಚುನಾವಣಾ ಕ್ರಮಗಳನ್ನು ನಿಯಂತ್ರಿಸಿದರು. ಚುನಾವಣೆಯ ಬಳಿಕ ಮುಸ್ಲಿಂ ಲೀಗ್ನ ನೇತೃತ್ವದಲ್ಲಿ ವಿಜ ಯೋತ್ಸವ ಆಚರಿಸಲಾಯಿತು. ಮುಸ್ಲಿಂ ಲೀಗ್ನಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ಖಾಸಿಲೈನ್ ವಾರ್ಡ್ನ ಕೌನ್ಸಿಲ್ ನ್ಯಾ. ವಿ.ಎಂ. ಮುನೀರ್ ಎರಡೂವರೆ ವರ್ಷದ ತನಕ ನಗರಸಭೆಯ ಅಧ್ಯಕ್ಷರಾಗಿ ಮುಂದುವರಿದಿದ್ದರು.