ಅಭ್ಯರ್ಥಿಗಳ ಪ್ರಚಾರ ವೆಚ್ಚ: ಲೆಕ್ಕದಲ್ಲಿ ಹೊಂದಾಣಿಕೆ ಇಲ್ಲ

ಕಾಸರಗೋಡು: ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಪ್ರಚಾರಕ್ಕೆ ವೆಚ್ಚಮಾಡಿದ ಮೊತ್ತದ ಬಗ್ಗೆ ಮೊದಲ ಹಂತದ ಲೆಕ್ಕಾಚಾರ ಮುಗಿಯಿತು. ಮೂರು ಒಕ್ಕೂಟಗಳ ಅಭ್ಯರ್ಥಿಗಳು ಸೇರಿದಂತೆ ಚುನಾವ ಣಾಧಿಕಾರಿ, ವೆಚ್ಚ ನಿರೀಕ್ಷಕ ಸಲ್ಲಿಸಿದ ಲೆಕ್ಕ ಹಾಗೂ ಔದ್ಯೋಗಿಕ ಲೆಕ್ಕದ ಮಧ್ಯೆ ಹೊಂದಾಣಿಕೆ ಕಂಡುಬರು ವುದಿಲ್ಲ. ಎಪ್ರಿಲ್ ೧ರ ವರೆಗಿರುವ ವೆಚ್ಚದ ವಿವರಗಳನ್ನು ಮೊದಲ ಹಂತದಲ್ಲಿ ದಾಖಲಿಸಲಾ ಗಿದೆ. ಸಾರ್ವಜನಿಕ ಸಭೆಯಲ್ಲಿ ಉಪ ಯೋಗಿಸುವ ಸಾಮಾಗ್ರಿಗಳು, ಪ್ರಚಾರ ಬೋರ್ಡ್‌ಗಳು, ಚುನಾವಣೆ ಕಚೇರಿ ಮೊದಲಾದ ೧೨೧ ರೀತಿಯಲ್ಲಿ ನಿಗದಿಪಡಿಸಿದ ಮೊತ್ತದ ಪ್ರಕಾರ ಚುನಾವಣೆವೆಚ್ಚ ವಿಭಾಗದ ಉನ್ನತಾಧಿಕಾರಿಯ ಮೇಲ್ನೋಟ ದಲ್ಲಿ ಇರಿಸಿಕೊಂಡ ರಿಜಿಸ್ಟರ್‌ನಲ್ಲಿ ಪ್ರತಿದಿನದ ವೆಚ್ಚವನ್ನು ದಾಖಲಿಸಲಾ ಗಿದೆ. ಇದು ಹಾಗೂ ಅಭ್ಯರ್ಥಿಗಳು ನೀಡುವ ಲೆಕ್ಕವನ್ನು ಪರಿಗಣಿಸಲಾ ಗುತ್ತದೆ. ಇದರಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಇದನ್ನು ತಿದ್ದುಪಡಿ ನಡೆಸಲು ಎರಡು ದಿನದ ಸಮಯವನ್ನು ಅಭ್ಯರ್ಥಿಗಳಿಗೆ ನೀಡಲಾಗಿದೆ.

ಮೊದಲ ಹಂತದ ಲೆಕ್ಕ ಪೂರ್ಣಗೊಳಿಸಿದಾಗ ಕಾಸರಗೋಡು ಮಂಡಲದಲ್ಲಿ ಅತ್ಯಂತ ಹೆಚ್ಚು ಹಣ ವೆಚ್ಚ ಮಾಡಿರುವುದು ಎಡರಂಗದ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ ಮಾಸ್ತರ್ ಆಗಿದ್ದಾರೆ. ೧೬,೫೭,೫೧೫ ರೂ. ಇವರು ವೆಚ್ಚಮಾಡಿದ್ದಾರೆ. ಐಕ್ಯರಂಗದ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್, ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಎಂಬಿವರು ಅನುಕ್ರಮವಾಗಿ ೭,೨೯,೭೮೮ ರೂ., ೮,೮೫,೪೨೪ ರೂ.ವನ್ನು ವೆಚ್ಚಮಾಡಿರುವುದಾಗಿ ಔಪಚಾರಿಕ ಲೆಕ್ಕವಿದೆ.  ಎಡರಂಗದ ಅಭ್ಯರ್ಥಿ ಸಾರ್ವಜನಿಕ ಸಭೆಗಳಿಗೆ ಹಾಗೂ ಇತರ ರೀತಿಯ ವೆಚ್ಚಗಳಿಗೆ ೧,೫೯,೫೮೦ ರೂ. ವೆಚ್ಚವಾಗಿರುವುದಾಗಿ ರಿಜಿಸ್ಟರ್‌ನಲ್ಲಿ ದಾಖಲಿಸಲಾಗಿತ್ತು. ಆದರೆ ಅಭ್ಯರ್ಥಿ ಆ ಬಗ್ಗೆ ಲೆಕ್ಕ ನೀಡಿರಲಿಲ್ಲ. ಪ್ರಚಾರ ಸಾಮಗ್ರಿಗಳಿಗೆ ೧೩,೫೩,೬೨೯ ರೂ. ವೆಚ್ಚ ಮಾಡಲಾಗಿದೆಯೆಂದು ದಾಖಲಿಸಲಾಗಿದ್ದರೂ ಅಭ್ಯರ್ಥಿ ನೀಡಿದ ಲೆಕ್ಕದಲ್ಲಿ ೪,೨೦,೨೫೦ ರೂ. ಲೆಕ್ಕವಿದೆ. ಪ್ರಚಾರ ವಾಹನಗಳಿಗೆ ೧,೪೪,೩೦೦ ರೂ. ವೆಚ್ಚವಾಗಿರು ವುದಾಗಿಯೂ  ಔಪಚಾರಿಕ ಲೆಕ್ಕದಲ್ಲಿದ್ದರೆ ಆ ಬಗ್ಗೆ ಅಭ್ಯರ್ಥಿ ಲೆಕ್ಕನೀಡಿಲ್ಲ.  ಯುಡಿಎಫ್ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್‌ರ ಸಾರ್ವಜನಿಕ ಸಭೆಗಳಿಗೆ ೭೮,೮೦೫ ರೂ., ಪ್ರಚಾರ ವಾಹನಗಳಿಗೆ ೪೫,೯೦೦ ರೂ. ಖಾತೆಯಲ್ಲಿ ದಾಖಲಿಸಲಾಗಿದೆ. ಆದರೆ ಆ ಬಗ್ಗೆ ವಿವರಗಳನ್ನು ಲಭ್ಯಗೊಳಿಸ ಲಾಗಿಲ್ಲ.  ಪ್ರಚಾರ ಸಾಮಗ್ರಿಗಳಿಗೆ ೬,೦೫,೦೮೩ ರೂ. ಲೆಕ್ಕಹಾಕಿದ್ದರೂ ದಾಖಲಿಸಿರುವುದು ೧,೭೦,೦೦೦ ರೂ. ಆಗಿದೆ.  ಎನ್‌ಡಿಎ ಅಭ್ಯರ್ಥಿ ತಾರಾ ಪ್ರಚಾರಕರಿಗಾಗಿ  ವೆಚ್ಚಮಾಡಿ ರುವುದು ೧,೧೦,೧೩೫ ರೂ. ಆಗಿದೆ. ಎಪ್ರಿಲ್ ೪ರಂದು ಸ್ಮೃತಿ ಇರಾನಿ ತಲುಪಿದ ಮಹಾಸಭೆಗೆ ಈ ವೆಚ್ಚವಾಗಿದೆ.  ಆದರೆ ಅಭ್ಯರ್ಥಿ ಇದನ್ನು ಲೆಕ್ಕದಲ್ಲಿ ದಾಖಲಿಸಿಲ್ಲ. ಸಾರ್ವಜನಿಕ ಸಭೆಗೆ ೫೯,೩೯೭ ರೂ., ಪ್ರಚಾರ ಸಾಮ ಗ್ರಿಗಳಿಗೆ ೬,೨೨,೯೦೨ ರೂ., ವಾಹ ನಗಳಿಗೆ ೯೩,೦೦೦ ರೂ. ಲೆಕ್ಕಹಾಕ ಲಾಗಿದ್ದರೂ ಅಭ್ಯರ್ಥಿ ಈ ಬಗ್ಗೆಯೂ ಮಾಹಿತಿ ನೀಡಿಲ್ಲ.

Leave a Reply

Your email address will not be published. Required fields are marked *

You cannot copy content of this page