ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು
ಕುಂಬಳೆ: ಅಸೌಖ್ಯ ಬಾಧಿಸಿ ಹಲವು ತಿಂಗಳುಗಳ ಕಾಲ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು. ಕುಂಬಳೆ ಮಾವಿನಕಟ್ಟೆ ರಹ್ಮಾನ್ ಮಸೀದಿ ಸಮೀಪ ವಾಸಿಸುವ ಆದಂ ಅನಸ್ (18) ಮೃತಪಟ್ಟ ವ್ಯಕ್ತಿ. ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ನಿನ್ನೆ ಮಧ್ಯಾಹ್ನ ನಿಧನ ಸಂಭವಿಸಿದೆ. ಅಬ್ದುಲ್ಲ ಸಕಲೇಶಪುರ-ಮಿಸ್ರಿಯಾ ದಂಪತಿಯ ಪುತ್ರನಾದ ಮೃತರು ಸಹೋದರರಾದ ಅರ್ಶಾದ್, ಅಫ್ಸಲ್, ಅಶ್ಫಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.