ಆಂಧ್ರದಲ್ಲಿ ಲಾರಿ ಪಲ್ಟಿ: 7 ಕಾರ್ಮಿಕರ ದಾರುಣ ಸಾವು

ಗೋದಾವರಿ: ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ದೇವಕಿಪಲ್ಲಿ ತಾಲೂಕಿನ ಚಿಲಕವಾರಿಪಾಲಕ ಎಂಬಲ್ಲಿ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಅದರಲ್ಲಿ ಪ್ರಯಾಣಿಸುತ್ತಿದ್ದ ಏಳು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರಲ್ಲಿ 6 ಕಾರ್ಮಿಕರು ತಾಡಿಪಳ್ಳದ ನಿವಾಸಿಗಳಾಗಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ತಡರಾತ್ರಿ ಈ ದುರ್ಘಟನೆ ನಡೆದಿದೆ.

Leave a Reply

Your email address will not be published. Required fields are marked *

You cannot copy content of this page