ಆಟೋರಿಕ್ಷಾ ಚಾಲಕ ಹೃದಯಾಘಾತದಿಂದ ನಿಧನ
ಮಂಜೇಶ್ವರ: ಕೊಲ್ಲಿಯಲ್ಲಿ ಉದ್ಯೋಗದಲ್ಲಿದ್ದ ಉದ್ಯಾವರ ಮಾಡ ಕೆರೆ ಬಳಿಯ ನಿವಾಸಿ ಅಸೌಖ್ಯ ನಿಮಿತ್ತ ಊರಿಗೆ ತಲುಪಿ ಆಟೋರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದ ಮಧ್ಯೆ ಹೃದಯಾಘಾತವುಂಟಾಗಿ ನಿಧನ ಹೊಂದಿದ್ದಾರೆ. ಉದ್ಯಾವರದಲ್ಲಿ ಆಟೋರಿಕ್ಷಾ ಚಾಲಕರಾಗಿರುವ ಪ್ರಕಾಶ್ (53) ನಿಧನ ಹೊಂದಿದವರು. ರಾತ್ರಿ ಮನೆಯಲ್ಲಿ ಊಟ ಮಾಡಿ ಕುಳಿತಿದ್ದ ವೇಳೆ ಹೃದಯಾ ಘಾತವುಂಟಾಗಿದ್ದು, ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಕೊಲ್ಲಿಯಲ್ಲಿ ಚಾಲಕನಾಗಿ ದುಡಿಯುತ್ತಿದ್ದ ಇವರು ಕಿಡ್ನಿ ಸಮಸ್ಯೆ ಹಿನ್ನೆಲೆಯಲ್ಲಿ ಎಂಟು ತಿಂಗಳ ಹಿಂದೆ ಊರಿಗೆ ತಲುಪಿದ್ದರು. ಚಿಕಿತ್ಸೆಯ ಜೊತೆಗೆ ಆಟೋಚಾ ಲಕರಾಗಿ ದುಡಿಯುತ್ತಿದ್ದರು.
ಮೃತರು ತಂದೆ ಪೂವಪ್ಪ ಬೆಳ್ಚಾಡ, ತಾಯಿ ಮಾಧವಿ, ಪತ್ನಿ ಅಕ್ಷತ, ಪುತ್ರಿ ಸಿಂಚನ, ಸಹೋದರ ರಾಜ ಬೆಳ್ಚಪ್ಪಾಡ (ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಕ್ಷೇತ್ರದ ಪಾತ್ರಿ), ಸಹೋದರಿ ಸುಲೋಚನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.