ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ ವಂಚನೆ: ಕೇಸು ದಾಖಲು
ಕಾಸರಗೋಡು: ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ 5.50 ಲಕ್ಷ ರೂ. ಪಡೆದು ವಂಚಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನ ಪ್ರಕಾರ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಧೂರು ಕೂಡ್ಲು ನಿವಾಸಿ ರಾಮ್ ಪ್ರಸಾದ್ (35) ಎಂಬವರು ನೀಡಿದ ದೂರಿನಂತೆ ಮಹಾರಾಷ್ಟ್ರ ನಿವಾಸಿಗಳಾದ ಬಿಂದ್ರಾ ಮೋಹನ್ ಮತ್ತು ರೋಷನ್ ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಫೇಸ್ಬುಕ್ ಮೂಲಕ ಪರಿಚಯಗೊಂಡ ಈ ಆರೋಪಿಗಳು ಆನ್ಲೈನ್ ಟ್ರೇಡಿಂಗ್ನ ಹೆಸರಲ್ಲಿ ನನ್ನಿಂದ 5,70,651 ರೂ. ಠೇವಣಿ ಪಡೆದು ಬಳಿಕ ವಂಚಿಸಿರುವುದಾಗಿ ತಿಳಿಸಲಾಗಿದೆ.